ಕಾಸರಗೋಡು: ಕಾಸರಗೋಡು ಸ್ಪೆಷಲ್ ಸಬ್ ಜೈಲಿನ ಹಿಂದಿನ ಭಾಗದ ಪಳ್ಳಂ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಾತ್ರವಲ್ಲ ಅಲ್ಲೇ ಪಕ್ಕದಲ್ಲಿರುವ ಹಳೆ ಕಟ್ಟಡವೊಂದು ಯಾವುದೇ ನಿಮಿಷದಲ್ಲಿ ಕುಸಿದುಬೀಳುವ ಸ್ಥಿತಿಯಲ್ಲಿದೆ.
ಟೌನ್ ಯುಪಿ ಶಾಲೆ ಮತ್ತು ಶಿಕ್ಷಣ ಉಪಜಿಲ್ಲಾ ಕಚೇರಿಯತ್ತ ಸಾಗುವ ಹಾಗೂ ವ್ಯಾಪಾರ ಸಂಸ್ಥೆಗಳಿಗೆ ಸಾಗುವ ಜನನಿಬಿಡ ರಸ್ತೆಯೂ ಇದಾಗಿದೆ. ಐದು ವರ್ಷಗಳ ಹಿಂದೆ ಈ ರಸ್ತೆಗೆ ಡಾಮರೀಕರಣ ನಡೆಸಲಾಗಿದೆ. ನಂತರದ ವರ್ಷಗಳಲ್ಲಿ ಕನಿಷ್ಠ ಇದರ ದುರಸ್ತಿ ಕೆಲಸಗ ಳನ್ನಾದರೂ ನಡೆಸಲಾಗಿಲ್ಲವೆಂದು ಪರಿಸರ ನಿವಾಸಿಗಳು ಹೇಳುತ್ತಿದ್ದಾರೆ.
ಹದಗೆಟ್ಟಿರುವುದರಿಂದಾಗಿ ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಅಪಘಾತಕ್ಕೊಳಗಾಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇದು ಕಾಸರಗೋಡು ನಗರಸಭೆಗೆ ಸೇರಿದ ರಸ್ತೆಯಾಗಿದೆ. ಆದ್ದರಿಂದ ನಗರಸಭೆ ಇತ್ತ ತುರ್ತಾಗಿ ಗಮನಹರಿಸಿ ರಸ್ತೆಯನ್ನು ತುರ್ತಾಗಿ ದುರಸ್ತಿಗೊಳ ಪಡಿಸಬೇಕೆಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.





