ಏಕ ಪುತ್ರನ ಅಕಾಲಿಕ ನಿಧನ ಮನೋವೇದನೆಯಿಂದ ಹೆತ್ತವರು ಆತ್ಮಹತ್ಯೆ

ಕೊಚ್ಚಿ: ಪುತ್ರನ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮನೋವೇದನೆ ಅನುಭವಿಸುತ್ತಿದ್ದ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ವೈಪಿನ್ ನರೈಕಲ್ ಕಳತ್ತಿಪರಂಬ್ ನಿವಾಸಿಗಳಾದ ಸಂಜೀವ್ (70), ಪತ್ನಿ ಸಬಿತ (60) ಎಂಬಿವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು. ನಿನ್ನೆ ಬೆಳಿಗ್ಗೆ ಮನೆಯ ಮುಂಭಾಗದಲ್ಲಿರುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರನ್ನು ಪತ್ತೆಹಚ್ಚಲಾಗಿದೆ. ಬೆಳಿಗ್ಗೆ 9 ಗಂಟೆಗೆ ಮನೆಗೆ ತಲುಪುವುದಾಗಿ ಸಂಜೀವ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಬೆಳಿಗ್ಗೆ ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ನೆರೆಮನೆ ನಿವಾಸಿಗೆ ಸಹೋದರ ತಿಳಿಸಿದ್ದು ಅವರು ಬಂದು ನೋಡಿದಾಗ ಮೃತದೇಹಗಳು ಪತ್ತೆಯಾಗಿವೆ.

ನರೈಕಲ್ ಪೊಲೀಸ್ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾನೂನು ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಸಬಿತ ಕೆಲವು ವರ್ಷದ ಹಿಂದೆ ನಿವೃತ್ತರಾಗಿದ್ದರು. ವಿದೇಶದಲ್ಲಿದ್ದ ಸಂಜೀವ ಹಿಂತಿರುಗಿದ ಬಳಿಕ ಮಂಞ ಕ್ಕಾಡ್‌ಮರದಲ್ಲಿ ಮರೈನ್ ವರ್ಕ್‌ಶಾಪ್ ನಡೆಸುತ್ತಿದ್ದರು. ಇವರ ಏಕ ಪುತ್ರ ಸಿಜೋಯ್ ಕೆಲವು ವರ್ಷದ ಹಿಂದೆ ಅಸೌಖ್ಯ ತಗಲಿ ಮೃತಪಟ್ಟಿದ್ದರು. ಆ ಬಳಿಕ ಇವರಿಬ್ಬರೂ ತೀವ್ರ ಮಾನಸಿಕ ಸಂಕಟದಲ್ಲಿದ್ದರೆಂದು ಮಾಹಿತಿ ಇದೆ. ಒಂದು ವರ್ಷದ ಹಿಂದೆ ಕೈಯ ನರ ತುಂಡು ಮಾಡಿ ಇವರಿ ಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು.

You cannot copy contents of this page