ಪೆರಡಾಲ ಕ್ಷೇತ್ರ ಬ್ರಹ್ಮಕಲಶೋತ್ಸವ ನಾಳೆಯಿಂದ: ವಾಹನ ಪ್ರಚಾರಕ್ಕೆ ಚಾಲನೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಾಳೆ ಆರಂಭ ವಾಗಲಿದೆ. ಇದರ ಪ್ರಚಾರದಂಗವಾಗಿ ವಾಹನ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಧ್ವಜ ಹಸ್ತಾಂತರಿಸಿ ಶುಭಕೋರಿದರು. ಅರ್ಚಕ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ, ಕಾರ್ಯ ದರ್ಶಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಹಸಿರುವಾಣಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಪ್ರಚಾರ ಸಮಿತಿಯ ಡಾ. ಶ್ರೀಶಕುಮಾರ ಪಂಜಿತ್ತಡ್ಕ, ಶ್ಯಾಮಪ್ರಸಾದ ಸರಳಿ, ಚಪ್ಪರ ಸಮಿತಿ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಅಲಂಕಾರ ಸಮಿತಿ ಸಂಚಾಲಕ ಪುಟ್ಟ ನಾಯ್ಕ ಪೆರಡಾಲ, ಲೆಕ್ಕ ಪರಿಶೋಧಕ ಕುಞ್ಞಣ್ಣ ಬದಿಯಡ್ಕ, ಶಿವಶಕ್ತಿ ಪೆರಡಾಲ ಸದಸ್ಯರು, ದೇವಸ್ಥಾನದ ಸಿಬ್ಬಂದಿವರ್ಗ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು. ಚಿತ್ರ: 14 ಬಿಎ ಪೆರಡಾಲ

RELATED NEWS

You cannot copy contents of this page