ಮುಳ್ಳೇರಿಯ: ತಾಯಿಯ ಸಹೋದರ ಹಾಗೂ ತಾಯಿ ಮಧ್ಯೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ 17ರ ಹರೆಯದ ಬಾಲಕಿಯ ವಿರುದ್ಧ ನಗ್ನತಾ ಪ್ರದರ್ಶನ ನಡೆಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. 34ರ ಹರೆಯದ ತಾಯಿಯ ಸಹೋದರನ ವಿರುದ್ಧ ಆದೂರು ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಲಕಿಯ ತಾಯಿ ಹಾಗೂ ಮಾವ ನೆರೆಕರೆ ಮನೆಗಳಲ್ಲಿ ವಾಸಿಸುತ್ತಿದ್ದು, ನಿನ್ನೆ ಇವರಿಬ್ಬರ ಮಧ್ಯೆ ಜಗಳ, ವಾಗ್ವಾದವುಂಟಾಗಿತ್ತು. ಬಾಲಕಿ ಮಧ್ಯ ಪ್ರವೇಧಿಸಿದಾಗ ಈತ ಮುಂಡು ಎತ್ತಿ ತೋರಿಸಿ ನಗ್ನತೆ ಪ್ರದರ್ಶಿಸಿರುವುದಾಗಿಯೂ, ಅಲ್ಲಿದ್ದ ಬಡಿಗೆಯಿಂದ ಹಲ್ಲೆಗೈದಿರು ವುದಾಗಿಯೂ ದೂರಲಾಗಿದೆ. ಬಾಲಕಿ ಚಿಕಿತ್ಸೆ ಪಡೆದ ನಂತರ ಆದೂರು ಪೊಲೀಸರಿಗೆ ದೂರು ನೀಡಿದ್ದಾಳೆ. ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವ ಮಧ್ಯೆ ಆರೋಪಿ ಪರಾರಿಯಾಗಿ ರುವುದಾಗಿ ತಿಳಿದು ಬಂದಿದೆ.







