ವಿದ್ಯುತ್ ಕಡಿತ: ಡಿವೈಎಫ್‌ಐಯಿಂದ ಉಪ್ಪಳದಲ್ಲಿ ಪ್ರತಿಭಟನೆ

ಉಪ್ಪಳ: ವಿದ್ಯುತ್ ಕಡಿತ ದಿನವೂ  ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಜನವಿರೋಧಿ ನೀತಿ ವಿರುದ್ಧ ಡಿವೈಎಫ್‌ಐ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ನಿನ್ನೆ ಉಪ್ಪಳ ಕೆಎಸ್‌ಇಬಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ತಾಲೂಕು ಕಚೇರಿ ಆವರಣದಿಂದ ಆರಂಭಗೊಂಡ ಮೆರವಣಿಗೆಯನ್ನು ವಿದ್ಯುತ್ ಕಚೇರಿ ಎದುರಲ್ಲಿ ಪೊಲೀಸರು ತಡೆದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು. ದೀಕ್ಷಿತ್ ಉಪ್ಪಳ ಅಧ್ಯಕ್ಷತೆ ವಹಿಸಿ ದರು. ಬ್ಲೋಕ್ ಕಾರ್ಯದರ್ಶಿ ಉದಯ ಸಿ.ಎಚ್, ಉಪಾಧ್ಯಕ್ಷ ರಮೇಶ್ ಟಿ, ಸದಸ್ಯರಾದ ನೌಶಾದ್, ಮಹೇಶ್ ಕುಮಾರ್,ಇಕ್ಭಾಲ್ ಮಾತನಾಡಿದರು. ವಿನಯ ಕುಮಾರ್ ಸ್ವಾಗತಿಸಿದರು

You cannot copy contents of this page