ಬದಿಯಡ್ಕ ಪಂಚಾಯತ್ ಮಳೆಗಾಲ ಪೂರ್ವ ಸ್ವಚ್ಛತಾ ಸಂದೇಶ ರ‍್ಯಾಲಿ

ಬದಿಯಡ್ಕ: ರೋಗ ಬಂದಮೇಲೆ ಚಿಕಿತ್ಸೆ ಮಾಡುವುದರ ಬದಲು ರೋಗ ಬಾರದಂತೆ ತಡೆಗಟ್ಟಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವುದೇ ಜಾಣತನ. ಮಳೆಗಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಿಕೊ ಳ್ಳುತ್ತವೆ. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆ ಯನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಬದಿಯಡ್ಕ ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ.ತಿಳಿಸಿದರು.
ಬದಿಯಡ್ಕ ಪಂ. ನೇತೃತ್ವದಲ್ಲಿ ಮಳೆಗಾಲ ಪೂರ್ವ ಸ್ವಚ್ಛತಾ ಕಾರ್ಯದ ಅಂಗವಾಗಿ ನಡೆದ ಸಂದೇಶ ರ‍್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡಂಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶ್ಯಾಮಪ್ರಸಾದ್ ಸರಳಿ, ಹರೀಶ, ಮಧುಸೂದನ, ಅನ್ನತ್ ಬೀವಿ, ಬಿಂಧ್ಯಾ ಎಂ., ಉಷಾ ಪಳ್ಳತ್ತಡ್ಕ, ಪಂಚಾಯತ್ ಕಾರ್ಯದರ್ಶಿ ಮನೋಜ್ ಕುಮಾರ್, ಸಹಾಯಕ ಕಾರ್ಯದರ್ಶಿ ಪಿ.ಕೆ. ಸಜಿ, ಹೆಲ್ತ್ ಸೂಪರ್‌ವೈಸರ್ ಎಂ. ಮಧುಸೂದನನ್, ಹೆಲ್ತ್ ಇನ್ಸ್ಪೆಕ್ಟರ್ ರಾಜೇಶ್ ನಂಬ್ಯಾರ್, ಪಿ.ಕೆ. ಬಾಬುರಾಜ್, ಸೂರಜ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾರ್ಯದರ್ಶಿ ರವಿ ನವಶಕ್ತಿ ನೇತೃತ್ವ ವಹಿಸಿದ್ದರು. ಪಂಚಾಯತ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹಸಿರು ಕ್ರಿಯÁಸೇನೆ, ಉದ್ಯೋಗ ಖಾತರಿ ಕಾರ್ಮಿಕರು, ಎ.ಡಿ.ಎಸ್, ಸಿ.ಡಿ.ಎಸ್ ಸದಸ್ಯರು, ವ್ಯಾಪಾರಿಗಳು, ಸಮಾಜ ಸೇವಕರು ಪಾಲ್ಗೊಂಡರು. ಬಳಿಕ ಬದಿಯಡ್ಕ ಪೇಟೆ, ಸಮುದಾಯ ಆರೋಗ್ಯಕೇಂದ್ರ ಪರಿಸರ ಹಾಗೂ ಪಂಚಾಯತ್ ಪರಿಸರದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

You cannot copy contents of this page