ಪಂ. ಚುನಾವಣೆ: ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಪಂಚಾಯತ್‌ಗಳಲ್ಲಿ ಅಭ್ಯರ್ಥಿಗಳ ಮಧ್ಯೆ ಆವೇಶಭರಿತ ಪೈಪೋಟಿ ; ಮುಖ್ಯಸ್ಪರ್ಧೆ ಕಾಂಗ್ರೆಸ್ – ಲೀಗ್ ಮಧ್ಯೆ

ಮಂಜೇಶ್ವರ:  ತ್ರಿಸ್ತರ ಪಂಚಾಯತ್ ಚುನಾವಣೆಯ ಪ್ರಚಾರ  ಬಿರುಸುಗೊಳ್ಳುತ್ತಿರುವಂತೆ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಗ್ರಾಮ ಪಂಚಾಯತ್‌ಗಳಲ್ಲಿ  ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ತೀವ್ರಗೊಂಡಿದೆ.  ಮುಂದೆ ಏನಾಗಲಿದೆಯೆಂದು ತಿಳಿಯಲು  ನಿರೀಕ್ಷೆಯೊಂದಿಗೆ ಮತದಾರರು ಕಾದುಕುಳಿತಿದ್ದಾರೆ.  ಪಂಚಾಯತ್ ಚುನಾವಣೆಯಲ್ಲಿ ಈ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ನ ಅಡಿಪಾಯ ತಪ್ಪಿಸುವುದಾಗಿ ಲೀಗ್ ಕಾರ್ಯಕ ರ್ತರು ಒಂದೆಡೆ ಹೇಳುತ್ತಿದ್ದರೆ ಲೀಗ್‌ನ ಆಡಳಿತವನ್ನೇ ಇಲ್ಲದಾಗಿಸುವುದಾಗಿ  ಕಾಂಗ್ರೆಸ್ ಮತ್ತೊಂದೆಡೆ  ತಿಳಿಸುತ್ತಿದ್ದಾರೆ.  ಈಮಧ್ಯೆ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಶ್ ಮಂಜೇಶ್ವರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಲೀಗ್‌ಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ   ನಾಗೇಶ್ ಮಂಜೇಶ್ವರ ಬ್ಲೋಕ್ ಡಿವಿಶನ್‌ನ ಲೀಗ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

 ಮಂಜೇಶ್ವರ ಗ್ರಾಮ ಪಂಚಾಂiiತ್‌ನ 24 ವಾರ್ಡ್‌ಗಳಲ್ಲಿ ಬಿಜೆಪಿಗೆ ಖಚಿತ ಗೆಲುವು ಲಭಿಸಬಹುದಾದ 8 ವಾರ್ಡ್‌ಗಳನ್ನು  ಮಿತ್ರಪಕ್ಷವಾದ ಕಾಂಗ್ರೆಸ್‌ಗೆ ಮುಸ್ಲಿಂ ಲೀಗ್ ಹಂಚಿರುವುದಾಗಿ  ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಡಿಎಂಕೆ ಮೊಹಮ್ಮದ್ ತಿಳಿಸಿದ್ದಾರೆ. ಇದರಲ್ಲಿ ಒಂದು ಅಥವಾ ಎರಡು ವಾರ್ಡ್‌ಗಳು ಕಾಂಗ್ರೆಸ್‌ಗೆ ಸಿಗಬಹುದು. ಆದರೆ ಆಪೈಕಿ ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಲೀಗ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ.  ಅಲ್ಲದೆ ಕಾಂಗ್ರೆಸ್‌ಗೆ ಈ ಹಿಂದಿದ್ದ ಎರಡು ವಾರ್ಡ್ ಹಾಗೂ  ಗೆಲುವು ಸಾಧಿಸಬಹುದಾದ ಒಂದು ವಾರ್ಡ್ ಬೇಕೆಂದು ಲೀಗ್‌ನೊಂದಿಗೆ ಆಗ್ರಹಪಟ್ಟಿದ್ದರೂ ಅದಕ್ಕವರು ಸಿದ್ಧರಾಗಿಲ್ಲವೆಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸಿದ್ದರೂ ಸೂಕ್ತ ಕ್ರಮ ಉಂಟಾಗದಿರುವುದನ್ನು ಪ್ರತಿಭಟಿಸಿ  ಬ್ಲಾಕ್ ಅಧ್ಯಕ್ಷ ಡಿಎಂಕೆ ಮೊಹಮ್ಮದ್ ಪಕ್ಷದ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಾಧ್ಯತೆಯಿದೆಯೆಂದು ಹೇಳಲಾಗು ತ್ತಿದೆ. ಮಂಜೇಶ್ವರ ಗ್ರಾಮ ಪಂಚಾ ಯತ್‌ನಲ್ಲಿ ಒಳಪಡುವ ಬಡಾಜೆ ಬ್ಲಾಕ್ ಪಂಚಾಯತ್ ಡಿವಿಶನ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳೆದ  ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.  ಆ ಡಿವಿಶನ್‌ಗಾಗಿ ಈ ಬಾರಿಯೂ ಕಾಂಗ್ರೆಸ್ ಬೇಡಿಕೆ ಮುಂದಿರಿಸಿದೆ. ಆದರೆ ಆ ಡಿವಿಶನ್ ತಮಗೆ ಬೇಕೆಂದು ಲೀಗ್   ತಿಳಿಸಿದೆ. ಬದಲಿಯಾಗಿ ಮಂಜೇಶ್ವರ ಮೀಸಲಾತಿ ವಾರ್ಡ್‌ನ್ನು ಕಾಂಗ್ರೆಸ್‌ಗೆ ನೀಡಲು ಲೀಗ್ ಮುಂದಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಾಭಿ ಪ್ರಾಯ ಹುಟ್ಟುವುದರೊಂದಿಗೆ  ಲೀಗ್ ನಾಯಕತ್ವ ಕಾಂಗ್ರೆಸ್ ಬ್ಲೋಕ್ ಉಪಾಧ್ಯಕ್ಷ ನಾಗೇಶ್‌ರನ್ನು ತಮ್ಮತ್ತ  ಸೆಳೆದಿದ್ದು ಲೀಗ್‌ಗೆ ಸೇರ್ಪಡೆಗೊಂಡರೆ ಮಂಜೇಶ್ವರ ಬ್ಲೋಕ್ ಡಿವಿಶನ್‌ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ಭರವಸೆ ನೀಡಿರುವುದಾಗಿಯೂ ಹೇಳಲಾಗುತ್ತಿದೆ.  ಇದರಂತೆ  ನಾಗೇಶ್ ಮುಸ್ಲಿಂಲೀಗ್‌ಗೆ ಸೇರ್ಪಡೆಗೊಂಡು ಮಂಜೇಶ್ವರ ಬ್ಲೋಕ್ ಡಿವಿಶನ್‌ನಲ್ಲಿ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿ ಸಕ್ರಿಯರಾಗಿದ್ದಾರೆ.  ಅಭ್ಯರ್ಥಿ ನಿರ್ಣಯಕ್ಕೆ ಸಂಬಂಧಿಸಿ ಪಕ್ಷದ ನಿಲುವನ್ನು  ಪ್ರತಿಭಟಿಸಿ ಕಾಂಗ್ರೆಸ್‌ನ ಮಂಜೇಶ್ವರ ಮಂಡಲ ಅಧ್ಯಕ್ಷ ಹನೀಫ್ ಪಡಿಂಞ್ಞಾರ್ ಮಂಡಲ ಸಮಿತಿ ಕಚೇರಿಯ ಫಲಕ ಹಾಗೂ  ಧ್ವಜವನ್ನು ತೆರವುಗೊಳಿಸಿ, ಕಚೇರಿಯ ಬಾಗಿಲು ಮುಚ್ಚಿ ಕೀಲಿಕೈಯನ್ನು ಕಟ್ಟಡದ ಮಾಲಕನಿಗೆ ಹಸ್ತಾಂತರಿಸಿರುವುದಾಗಿ ಹೇಳಲಾಗು ತ್ತಿದೆ. ಇದೇ ವೇಳೆ ರಾಜಕೀಯ ಪಕ್ಷ ತಲೆಬಾಗಿರುವುದನ್ನು ಪ್ರತಿಭಟಿಸಿ ವಿವಿಧ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನ ವರು ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಂಜೇಶ್ವರದಲ್ಲಿ ಹಿರಿಯ ಕಾಂಗ್ರೆಸ್ ನೇತಾರ ಗುರುವಪ್ಪ ಬಂಗ್ರಮಂಜೇಶ್ವರ ವಾರ್ಡ್‌ನಲ್ಲಿ ಸ್ವತಂತ್ರನಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಮಂಜೇಶ್ವರ ಪಂಚಾಯತ್‌ನ ಸ್ಥಿತಿ ಹೀಗಾದರೆ ಸಮೀಪದ ಮಂಗಲ್ಪಾಡಿಯಲ್ಲಿ  ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ  2 ವಾರ್ಡ್‌ಗಳು ಹಾಗೂ ಅದರ ಹೊರತು ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸಾಧಿಸಲು ಸಾಧ್ಯವಾಗುವ ಮತ್ತೊಂದು ವಾರ್ಡ್ ನೀಡುವಂತೆ ಕಾಂಗ್ರೆಸ್ ಲೀಗ್ ನೊಂದಿಗೆ ಆಗ್ರಹಪಟ್ಟಿದೆ. ಆದರೆ ಯುಡಿ ಎಫ್‌ಗೆ  ಸೋಲು ಖಚಿತವಾದ ಮೂರು ವಾರ್ಡ್‌ಗಳನ್ನು ಲೀಗ್ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ.  ಬೇಕೂರು ವಾರ್ಡ್ ಹಾಗೂ ಬಿಜೆಪಿಯ ಭದ್ರ ಕೋಟೆಯಾದ ಪ್ರತಾಪನಗರ  ಹಾಗೂ ಹಲವು ಕಾಲಗಳಿಂದ ಬಿಜೆಪಿ ಗೆಲುವಿನ ಪತಾಕೆ ಹಾರಿಸುವ ಮಳ್ಳಂಗೈಯನ್ನು ಯುಡಿಎಫ್‌ನ ಪ್ರಮುಖ ಪಕ್ಷಕ್ಕೆ ಮಿತ್ರಪಕ್ಷವಾದ ಲೀಗ್ ನೀಡಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಇದನ್ನು ಪ್ರತಿಭಟಿಸಿ ಕಾಂಗ್ರೆಸ್  ಮಂಜೇಶ್ವರ ಬ್ಲೋಕ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸೀಗಂದಡಿ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿ  ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

 24 ಮಂದಿ ಸದಸ್ಯರುಳ್ಳ ಮಂಗಲ್ಪಾಡಿ ಪಂಚಾಯತ್ ವಾರ್ಡ್‌ಗಳಲ್ಲಿ ಇಚ್ಲಂಗೋಡು,ಮುಟ್ಟಂ, ಬಂದ್ಯೋಡು ವಾರ್ಡ್‌ಗಳು ಕಾಂಗ್ರೆಸ್ ಆಗ್ರಹಪಟ್ಟ ಮೂರು ವಾರ್ಡ್‌ಗಳೆಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.  ಬಾಕಿ 21 ಸೀಟುಗಳಿದ್ದರೂ  ಅದನ್ನು ನೀಡಲು ಸಿದ್ಧವಾಗದ ಲೀಗ್ ನಿಲುವು ಕಾಂಗ್ರೆಸ್  ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.  ಇದರಂಗವಾಗಿ ಬಂದ್ಯೋಡು ವಾರ್ಡ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತನಾದ ಬಾಬು ಹಾಗೂ ಮುಟ್ಟಂ ವಾರ್ಡ್‌ನಲ್ಲಿ ಜಾಬಿರ್ ಪಚ್ಚಂಬಳ,  10ನೇ ವಾರ್ಡ್‌ನಲ್ಲಿ  ನಸೀರ, 12ನೇ ವಾರ್ಡ್ ಇಚ್ಲಂಗೋಡಿನಲ್ಲಿ ಗೀತಾ, ಹೊಸ ವಾರ್ಡಾದ 13 ಮಲಂದೂರಿನಲ್ಲಿ  ಸುಲೇಖಾ ಟೀಚರ್ ಯುಡಿಎಫ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವುದಾಗಿ ಹೇಳಲಾಗುತ್ತಿದೆ. 

ಕುಂಬಳೆ ಪಂಚಾಯತ್‌ನಲ್ಲಿ ಪದೇ ಪದೇ  ತಿರುಗೇಟೆಂಬ ರೀತಿಯಲ್ಲಿ ಕಾಂಗ್ರೆಸ್ ಹಾಗೂ ಲೀಗ್ ಬಂಡುಕೋರರನ್ನು ಚುನಾವಣಾ ಕಣಕ್ಕಿಳಿಸಿ ಸ್ಪರ್ಧೆಗೆ  ಕಾವೇರಿಸುತ್ತಿರುವುದಾಗಿ ಮತದಾರರು ಹೇಳುತ್ತಿದ್ದಾರೆ.  ಕುಂಬಳೆಯಲ್ಲೂ 24 ವಾರ್ಡ್‌ಗಳಿವೆ. ಇದರಲ್ಲಿ  ಗೆಲುವು ಸಾಧ್ಯತೆಯುಳ್ಳ 14 ವಾರ್ಡ್‌ಗಳನ್ನೂ ಕೂಡಾ  ಲೀಗ್ ಸ್ವಂತವಾಗಿಸಿದೆ. ಬಿಜೆಪಿಗೆ ಹಾಗೂ ಸಿಪಿಎಂಗೆ ಅಡಿಪಾಯವುಳ್ಳ 10 ವಾರ್ಡ್‌ಗಳನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಕುಂಬಳೆ ರೈಲ್ವೇ ನಿಲ್ದಾಣ ವಾರ್ಡ್‌ನಲ್ಲಿ  ಮುಖ್ಯ ಸ್ಪರ್ಧೆ ಕಾಂಗ್ರೆಸ್ ಹಾಗೂ ಲೀಗ್ ಮಧ್ಯೆಗಾರಿರುವುದೆಂದು ಖಚಿತಗೊಂಡಿದೆ. ಕಾಂಗ್ರೆಸ್‌ನ ಸೀಟಾಗಿದ್ದ ಈ ವಾರ್ಡನ್ನು ಲೀಗ್ ತನ್ನದಾಗಿಸಿ ಬದಲಾಗಿ ಮುಳಿಯಡ್ಕವನ್ನು ಕಾಂಗ್ರೆಸ್‌ಗೆ ನೀಡಿದೆ. ಇದನ್ನು ಪ್ರತಿಭಟಿಸಿ ಮೊಗ್ರಾಲ್‌ನ ಎ ಸಮೀರರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ವಾರ್ಡ್‌ನಲ್ಲಿ ಘೋಷಿಸಲಾಗಿದೆ. ಇನಾಸ್ ಫಹಾದ್‌ರನ್ನು ಈ ಹಿಂದೆ ಲೀಗ್ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಸಮೀರ ನಾಮಪತ್ರ ಹಿಂತೆಗೆದುಕೊಳ್ಳಬೇಕೆಂದು ಲೀಗ್ ನಾಯಕತ್ವ ಕಾಂಗ್ರೆಸ್ ನೊಂದಿಗೆ ಆಗ್ರಹಪಟ್ಟಿದೆಯೆಂದು ಹೇಳಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ನ ಗಣೇಶ್ ಭಂಡಾರಿ ಸ್ಪರ್ಧಿಸುವ 10ನೇ ವಾರ್ಡ್ ಮುಳಿಯಡ್ಕದಲ್ಲಿ ಕಾಂಗ್ರೆಸ್ ವಿರುದ್ಧ ಲೀಗ್‌ನ ಸಬೂರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹಾಗೂ ಲೀಗ್ ಮಧ್ಯೆ ಈ ವಾರ್ಡ್‌ಗಳಲ್ಲಿ ಆವೇಶಭರಿತ ಸ್ಪರ್ಧೆ ನಡೆಯಲಿದೆಯೆಂದು ಮತದಾರರು ಹೇಳುತ್ತಿದ್ದಾರೆ. ಅದರ ಫಲವಾಗಿ ಎಸ್‌ಡಿಪಿಐ ಹಾಗೂ ಬಿಜೆಪಿಗೆ ಈ ವಾರ್ಡ್‌ಗಳಲ್ಲಿ ಗೆಲುವು ಸಾಧ್ಯತೆ ಹೆಚ್ಚಿರುವುದಾಗಿ ಹೇಳಲಾಗುತ್ತಿದೆ. ಇದೇ ವೇಳೆ 16ನೇ ವಾರ್ಡಾದ ಮೊಗ್ರಾಲ್ ಕೊಪ್ಪಳದಲ್ಲಿ ಕಳೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿದ್ದ ನಿಸಾನ ರಿಯಾಸ್ ಈ ಬಾರಿ ಲೀಗ್ ವಿರುದ್ಧ ಸ್ಪರ್ಧಾ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಲೀಗ್ ಪಂಚಾಯತ್ ನಾಯಕತ್ವ ಇಲ್ಲಿ  ಬಂಡುಕೋರ ಅಭ್ಯರ್ಥಿಯನ್ನು  ಕಣಕ್ಕಿಳಿಸಿ  ಸೋಲಿಸಿರುವುದಾಗಿ ಆರೋಪಿಸಿ ರಿಸಾನ ಸ್ಪರ್ಧಾಕಣದಲ್ಲಿ  ದೃಢವಾಗಿ ನಿಂತಿದ್ದಾರೆ. ಇದೇ ವೇಳೆ ಕೊಪ್ಪಳದಲ್ಲಿ  ವೆಲ್ಫೇರ್ ಪಾರ್ಟಿ ರಿಸಾನಾ ನಿಯಾಸ್‌ಗೆ ಬೆಂಬಲ ಘೋಷಿಸಿರುವುದಾಗಿ ಹೇಳಲಾಗು ತ್ತಿದೆ. ಆಶಾ ಕಾರ್ಯಕರ್ತೆ ಖೈರುನ್ನೀಸ ಇಲ್ಲಿ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿ ಸುತ್ತಿದ್ದಾರೆ. ಎಡರಂಗ ಅಭ್ಯರ್ಥಿ ಯಾಗಿ ಆರ್‌ಜೆಡಿಯ  ಆಯಿಶಾ ರಿಯಾಸ್  ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಆಯಿಶಾ ಇಬ್ರಾಹಿಂ  ಸ್ಪರ್ಧಾ ಕಣದಲ್ಲಿದ್ದಾರೆ.

RELATED NEWS

You cannot copy contents of this page