ಸೋಂಕಾಲಿನ ಮನೆ ಅಂಗಳದಲ್ಲಿ ಸತ್ತು ಬಿದ್ದ ನಾಯಿ ಮರಿ: ಸ್ಥಳೀಯರಿಗೆ ದುರ್ನಾತ ಸಮಸ್ಯೆ

ಉಪ್ಪಳ: ನೂತನ ಮನೆಯ ಅಂಗಳದಲ್ಲಿ ಬೀದಿ ನಾಯಿಯ ಐದು ಮರಿಗಳು ನಿಗೂಢವಾಗಿ ಸತ್ತು ಬಿದ್ದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುರ್ವಾಸನೆಯಿಂದ ಪರಿಸರ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಮಂಗಲ್ಪಾಡಿ ಪಂಚಾಯತ್‌ನ 20ನೇ ವಾರ್ಡ್ ಪ್ರತಾಪನಗರ ರಸ್ತೆಯ ಸೋಂಕಾಲಿನಲ್ಲಿ ಈ ಘಟನೆ ನಡೆದಿದೆ. ಬಾಯಾರು ನಿವಾಸಿ ಯೋರ್ವರು ನೂತನವಾಗಿ ನಿರ್ಮಿಸಿ ಕೆಲಸ ಪೂರ್ತಿಗೊಂಡ ಮನೆಯ ಅಂಗಳದ ಹಾಗೂ ಸಿಟ್‌ಔಟ್‌ನಲ್ಲಿ ಒಟ್ಟು ಐದು ನಾಯಿ ಮರಿಗಳು ಎರಡು ದಿನಗಳ ಹಿಂದೆ ಸತ್ತು ಹೋಗಿ ಕೊಳೆತ ಸ್ಥಿತಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದೆ. ಇದು ದುರ್ವಾಸನೆ ಬೀರುತ್ತಿದ್ದು, ಪರಿಸರದ ಕುಟುಂಬಗಳಿಗೆ ಸಮಸ್ಯೆಯಾಗಿದೆ. ಹಲವು ದಿನಗಳಿಂದ ನಾಯಿ ಮರಿಗಳು ಈ ಪರಿಸರದಲ್ಲಿ ಠಿಕಾಣಿ ಹೂಡಿತ್ತು. ದಿಢೀರನೆ ಸತ್ತು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page