ಪಚ್ಚಂಬಳ ಮಖಾಂ ಉರೂಸ್ ಕರಪತ್ರ ಬಿಡುಗಡೆ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ನವಂಬರ್ 15ರಿಂದ 28ರ ವರೆಗೆ ನಡೆಯಲಿದ್ದು, ಇದರ ಕರಪತ್ರವನ್ನು ಉರೂಸ್ ಸಂಚಾಲಕ ಅಸೀಸ್ ಟಿಂಬರ್ ಜಮಾಯತ್ ಕಾರ್ಯದರ್ಶಿ ಮೊಹಮ್ಮದ್ ಅಬ್ದುಲ್ಲರಿಗೆ ನೀಡಿ ಬಿಡುಗಡೆಗೊಳಿಸಿದರು. ಜಮಾಯತ್ ಕೋಶಾಧಿಕಾರಿ ಮಜೀದ್ ಪಚ್ಚಂಬಳ, ಉಪಾಧ್ಯಕ್ಷ ಅಶ್ರಫ್ ಪಚ್ಚಂಬಳ, ಮೊದೀನ್‌ಕುಂಞಿ ಹಾಜಿ, ಹಸನ್ ಬೀರೊಳಿಕೆ, ಖತೀಬ್ ಜಹ್‌ಫರ್ ಮುಸ್ತಾನಿ, ಜೊತೆ ಸಂಚಾಲಕ ಯೂಸಫ್, ಪ್ರಚಾರ ಸಂಚಾಲಕ ಜಸೀಲ್ ಹುಬ್ಬಳ್ಳಿ, ಸೀರಾಜ್ ಇಚ್ಲಂಗೋಡು ಭಾಗವಹಿಸಿದರು. ಹಲವಾರು ಗಣ್ಯರು ಭಾಗವಹಿಸುವ ಉರೂಸ್ ನವಂಬಂರ್ 29ರಂದು ಅನ್ನಸಂತರ್ಪಣೆಯೊಂದಿಗೆ ಸಮಾಪ್ತಿಗೊಳ್ಳಲಿದೆ.

RELATED NEWS

You cannot copy contents of this page