ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಕುಡಾಲುಮೇರ್ಕಳ ಪೆರಿಯಪ್ಪಾಡಿ ಶ್ರೀ ಶಾಸ್ತಾರೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಆ ಪ್ರಯುಕ್ತ ನೂತನ ಜೀರ್ಣೋದ್ಧಾರ ಸಮಿತಿಯ ಪದಾದಿಕಾರಿಗಳ, ಸದಸ್ಯರ ಪದಗ್ರಹಣ ಸಮಾರಂಭ, ವಿಜ್ಞಾಪನಾ ಪತ್ರದ ರೂಪುರೇಷೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಜರಗಿತು.
ಆಡಳಿತ ಮೊಕ್ತೇಸರ ಕೆ.ಎಂ. ನಾರಾಯಣ ಭಟ್ ಪೆರಿಯಪ್ಪಾಡಿ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಎಂ.ಕೇಶವ ಭಟ್ ಮಣಿಲ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ರಘು ಕಲ್ಕಾರ್ ಮಾಣಿ ಮತ್ತು ಉಪಾಧ್ಯಕ್ಷ ದಾಸಪ್ಪ ಸಾಮಾನಿ ಕುಡಾಲುಗುತ್ತು ವಿವಿಧ ಕಾರ್ಯಯೋಜನೆ ಕುರಿತು ಮಾತನಾಡಿದರು. ಕೋಶಾದಿಕಾರಿ ಕೆ.ಎಂ.ಸುಬ್ರಹ್ಮಣ್ಯ ಭಟ್ ಪೆರಿಯಪ್ಪಾಡಿ ಪ್ರಾಸ್ತಾವಿಕ ನುಡಿದು ನಿರೂಪಿಸಿದರು. ಕೃತಿಕಾ ಎಸ್. ಪ್ರಾರ್ಥನೆ ಹಾಡಿದರು. ಸಮಿತಿಯ ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ಪಾವಳಗುತ್ತು ಸ್ವಾಗತಿಸಿ, ವಂದಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವಾಸ್ ಎಂ. ಪೆರಿಯಪ್ಪಾಡಿ, ಉಪಾಧ್ಯಕ್ಷರಾದ ಸುಂದರ ಶೆಟ್ಟಿಗಾರ್, ಅಣ್ಣು ಶೆಟ್ಟಿಗಾರ್, ಜೊತೆ ಕಾರ್ಯದರ್ಶಿಗಳಾದ ಕೆ.ಎಂ.ಹರಿಪ್ರಸಾದ್ ಪೆರಿಯಪ್ಪಾಡಿ, ಜಯಶಂಕರ ಕಯ್ಯಾರು, ಆಶಾ ಹರಿಪ್ರಸಾದ್, ಸುಮಿತ್ರಾ ಕೆ., ಸದಸ್ಯರಾದ ಸತೀಶ್ ದರ್ಕಾಸ್, ಪದ್ಮಾವತಿ, ಸುಮತಿ, ವನಿತಾ ಸಂತೋಷ್ ಉಪಸ್ಥಿತರಿದ್ದರು.







