ಮುಳ್ಳೇರಿಯ: ಕುಂಟಾರು ಹುಣಸೆಯಡ್ಕ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ವೀರೋಜಿ ರಾವ್ (9೦) ನಿಧನ ಹೊಂದಿದರು. ಎಡಪರಂಬ ಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ಪ್ರವೀಣ್ ಕುಮಾರ್, ಯಶ್ವಂತ್ ಕುಮಾರ್, ಕಿಶೋರ್ ಕುಮಾರ್, ಸೊಸೆಯಂದಿರಾದ ಗೀತಾ ಕುಮಾರಿ, ಯಶೋಧ, ನವ್ಯ ಕುಮಾರಿ, ಸಹೋದರಿಯರಾದ ಲೀಲಾವತಿ ಆದೂರು ಮೇಗಿನಮನೆ, ಶೀಲಾವತಿ ಮಂಗಳೂರು, ಶಾರದ ಮಂಗಳೂರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





