ಮಾಡ ಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ನಿಧನ

ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ಜನಾರ್ದನ ಯು. (70) ನಿಧನ ಹೊಂದಿದರು. ಮಂಜಪ್ಪ- ಪೂವಮ್ಮ ದಂಪತಿ ಪುತ್ರನಾಗಿದ್ದಾರೆ. ಎಸ್‌ಎನ್‌ಡಿಪಿ, ಮಾಡ ತೀಯಾ ಸಮಾಜದ ಮುಖಂ ಡರಾಗಿದ್ದರು. ಮಾಡ ಕ್ಷೇತ್ರದಲ್ಲಿ ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಇಂದು ಮುಂಜಾನೆ ೩ ಗಂಟೆಗೆ ನಿಧನ ಸಂಭವಿಸಿದೆ.

ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ನಿತಿನ್, ದೀಪಿಕ, ಅಳಿಯ ಶಿವಪ್ರಸಾದ್ ಕೊಲ್ಯ, ಸೊಸೆ ಶ್ರದ್ಧಾ, ಸಹೋದರಿಯರಾದ ಸೇಸಮ್ಮ, ಕೃಷ್ಣಮ್ಮ, ಯಮುನ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಓರ್ವೆ ಸಹೋದರಿ ರಮ ಈ ಹಿಂದೆ ನಿಧನ ಹೊಂದಿದ್ದಾರೆ. ನಿಧನಕ್ಕೆ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ಕ್ಷೇತ್ರದ ಆಡಳಿತ ಸಮಿತಿ, ಉತ್ಸವ ಸಮಿತಿ, ಶ್ರೀ ಅರಸು ಕೃಪಾ, ವೀರಮಾರುತಿ ವ್ಯಾಯಾಮ ಶಾಲೆ, ವಿ.ಎಂ. ಮಾಡ ಫ್ರೆಂಡ್ಸ್, ಯುವ ಸಂಗಮ ಮಾಡ, ಕಟ್ಟೆ ಫ್ರೆಂಡ್ಸ್ ಮಾಡ ಸಂತಾಪ ಸೂಚಿಸಿದೆ.

RELATED NEWS

You cannot copy contents of this page