ಪೈವಳಿಕೆ: ಬಾಯಾರು ಕಲ್ಲಗದ್ದೆ ನಿವಾಸಿ, ನಿವೃತ ದೈಹಿಕ ಶಿಕ್ಷಕ ಶಿವರಾಮ ಶೆಟ್ಟಿ (80) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಮಂಗ ಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದರು. ಕಾಯರ್‌ಕಟ್ಟೆ ಸರಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದಾರೆ. ಅಲ್ಲದೆ ಬಾಯಾರು ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಬೆರಿಪದವು ಶ್ರೀ ಮೂಕಾಂಬಿಕ ಭಜನಾ ಮಂದಿರದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಉಮಾವತಿ, ಮಕ್ಕಳಾದ ಅಜಿತ್, ವಿದ್ಯಾ, ಸೊಸೆ ಶ್ವೇತ, ಅಳಿಯ ಹರೀಶ್ ಶೆಟ್ಟಿ, ಸಹೋದರ ಸಹೋದರಿಯ ರಾದ ಪದ್ಮನಾಭ ಶೆಟ್ಟಿ, ಜಗದೀಶ ಶೆಟ್ಟಿ, ಗಿರಿಜ, ಚಂದ್ರಾವತಿ, ಭವಾನಿ, ಸರಸ್ವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸಹೋದರಿ ಉಮಾ ವತಿ, ಸಹೋದರ ಗೋಪಾಲಕೃಷ್ಣ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ.







