ನಿವೃತ್ತ ಹಡಗು ಉದ್ಯೋಗಿ ನಿಧನ

ಬದಿಯಡ್ಕ: ಬದಿಯಡ್ಕ ಶಾಸ್ತ್ರೀಸ್ ಕಂಪೌಂಡ್ ನಿವಾಸಿ ಶ್ಯಾಮ್ ಶೆಟ್ಟಿ (62) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಹಡಗಿನಲ್ಲಿ ಉದ್ಯೋ ಗಿಯಾಗಿದ್ದ ಇವರು ನಿವೃತ್ತಿ ಬಳಿಕ ಮನೆಯಲ್ಲಿದ್ದರು. ಇತ್ತೀಚೆಗೆ ಅಸೌಖ್ಯ ಕಾಣಿಸಿಕೊಂಡ ಇವರನ್ನು ಉಡುಪಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ. ಮೃತದೇಹ ವನ್ನು ನಿನ್ನೆ ಸ್ವ-ಗೃಹಕ್ಕೆ ತಲುಪಿಸಿ ಬಳಿಕ ಮೂಕಂಪಾರೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ದಿವಂಗತರಾದ ರಾಮಯ್ಯ ಶೆಟ್ಟಿ- ಲಕ್ಷ್ಮಿ ಶೆಟ್ಟಿ ದಂಪತಿ ಪುತ್ರನಾದ ಮೃತರು ಪತ್ನಿ ಉಷಲತ (ಬ್ರಹ್ಮಾವರದಲ್ಲಿ ಸರಕಾರಿ ಶಾಲೆ ಅಧ್ಯಾಪಿಕೆ), ಮಕ್ಕಳಾದ ಶಮ್ಯ, ಶಮಂತ್, ಸಹೋದರಿಯರಾದ ರೇವತಿ, ಪುಷ್ಪ, ಶ್ಯಾಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಶ್ಯಾಮ್ ಶೆಟ್ಟಿಯವರ  ಸಹೋದರರಾದ ನಾರಾಯಣ ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page