ಗ್ರಾಮೀಣ ಸಡಕ್ ರಸ್ತೆ ಕಾಮಗಾರಿ ಕಳಪೆ: ಕುಸಿದ ಬದಿ; ಅಡ್ಕ-ಮುಳ್ಳೇರಿಯ ರಸ್ತೆ ಶೋಚನೀಯದತ್ತ

ಮುಳ್ಳೇರಿಯ: ಸುಮಾರು ೨.೬೧ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯೊಂದು ಕಳಪೆ ಕಾಮಗಾರಿಯಿಂದ ಕೂಡಿದ್ದಾಗಿದೆ ಎಂದು ಈಗ ಸಾಬೀತಾ ಗಿದೆ. ನಿರ್ಮಾಣ ಸಮಯದಲ್ಲೇ ಸ್ಥಳೀಯರು ಹಾಗೂ ಸಾರ್ವಜನಿಕರು ರಸ್ತೆಯ ಲೋಪದೋಷಗಳ ಬಗ್ಗೆ ಸ್ವರವೆತ್ತಿದ್ದರು. ಆದರೂ ಅದಕ್ಕೆ ಯಾವುದೇ ಮನ್ನಣೆ ನೀಡದೆ ರಸ್ತೆ ಕಾಮಗಾರಿ ಮುಗಿಸಿದ ಒಂದು ವರ್ಷದಲ್ಲಿಯೇ ರಸ್ತೆ ವಿವಿಧ ಸಮಸ್ಯೆಗಳಿಗೆ ತುತ್ತಾಗಿದೆ. ಮುಳ್ಳೇರಿಯ ಪೈಕ ರಸ್ತೆಯ ನೀರೋಳಿಪಾರದಿಂದ ಅಡ್ಕ ಮೂಲಕ ಮುಳ್ಳೇರಿಯಕ್ಕೆ ಸಾಗುವ ರಸ್ತೆಯನ್ನು ಕಳೆದ ವರ್ಷ ಕೇಂದ್ರದ ಗ್ರಾಮೀಣ ಸಡಕ್ ಯೋಜನೆಯಲ್ಲಿ ನಿರ್ಮಿಸಲಾಗಿತ್ತು. ಮುಂಡೋಳು ಜಂಕ್ಷನ್‌ನಿಂದ ಮುಳ್ಳೇರಿಯ ಪಾರ್ಥಕೊಚ್ಚಿವರೆಗಿನ 3 ಕಿಲೋ ಮೀಟರ್ ರಸ್ತೆಯನ್ನು ಜರ್ಮನ್ ತಾಂತ್ರಿಕತೆ ಮೂಲಕ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಕಳಪೆ ಮಟ್ಟದಿಂದ ನಡೆಸಿದ ಕಾರಣ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಮುಳ್ಳೇರಿಯ ಬಳಿಯ ತೋಟದ ಬದಿಯಲ್ಲಿರುವ ನೀರಿನ ಟ್ಯಾಂಕ್ ಬಳಿ ರಸ್ತೆ ಬದಿ ಕುಸಿದಿದೆ. ಕಳೆದ ಮೂರು ದಿನಗಳ ಹಿಂದೆ ಇಲ್ಲಿ ಮಣ್ಣು ಕುಸಿದು ಬಿದ್ದಿದ್ದು, ಇದರಿಂದ ರಸ್ತೆಯ ಬದಿಯಲ್ಲಿ ಸಂರಕ್ಷಣೆಗಾಗಿ ಹಾಕಿದ ಗುರುತು ಕಲ್ಲುಗಳು ಕೂಡಾ ಮಣ್ಣಿನಡಿಗಾಗಿದೆ. ಇಲ್ಲಿ ಇನ್ನು ಕೂಡಾ ಕುಸಿಯುವ ಭೀತಿ ನೆಲೆಗೊಂಡಿದೆ. ಇದಲ್ಲದೆ ಇಲ್ಲೇ ಇರುವ ಸೇತುವೆ ಬಳಿಯಲ್ಲಿ ಡಾಮರು ಕಿತ್ತು ಹೋಗಿದೆ. ರಸ್ತೆಯಲ್ಲಿ ಗೊಂಡ ಸೃಷ್ಟಿಯಾಗಿದೆ. ಕೆಲವು ಕಡೆಗಳಲ್ಲಿ ರಸ್ತೆ ಕುಸಿದು ಬಿರುಕು ಬಿಟ್ಟಿದೆ. ಜರ್ಮನಿ ತಂತ್ರಜ್ಞಾನವೆಂದು ಹೇಳಿ 15 ವರ್ಷದವರೆಗೆ ಯಾವುದೇ ಹಾನಿ ಉಂಟಾಗದೆಂದು ಹೇಳಲಾಗುತ್ತಿದ್ದ ಈ ರಸ್ತೆ ಒಂದೇ ವರ್ಷದಲ್ಲಿ ಹಾನಿಯಾಗಿರುವುದಕ್ಕೆ ಗುತ್ತಿಗೆದಾರನ ಕಳಪೆ ಕಾಮಗಾರಿ ಕಾರಣವೆನ್ನಲಾಗಿದೆ.

ರಸ್ತೆ ಬದಿಯಲ್ಲಿ ಚರಂಡಿ ಕೂಡಾ ಸರಿಯಾಗಿ ನಿರ್ಮಿಸದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುವುದು ರಸ್ತೆ ಕುಸಿಯಲು ಕಾರಣವಾಗಿದೆ. ಇದ್ದ ಚರಂಡಿ ಕೂಡಾ ಮುಚ್ಚಲ್ಪಟ್ಟಿದ್ದು ಅದನ್ನು ಶುಚಿಗೊಳಿಸಲಾಗಿಲ್ಲ. ಅಲ್ಲದೆ ಮುಳ್ಳೇರಿಯ ಪೇಟೆ ಬಳಿಯ ಕಾಡಗಂ ಸಹಕಾರಿ ಬ್ಯಾಂಕ್ ಮುಂಭಾಗದಲ್ಲೂ ಚರಂಡಿ ಇಲ್ಲದೆ ರಸ್ತೆ ಹಾನಿಯಾಗುತ್ತಿದೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಸಡಕ್ ಕಚೇರಿಗೆ ಮನವಿ ನೀಡಿದರೂ ಯಾವುದೇ ಫಲ ಉಂಟಾಗಲಿಲ್ಲ ವೆಂದೂ ಅವರು ಮೌನ ವಹಿಸಿರುವು ದಾಗಿ ಪಂಚಾಯತ್ ಅಧಿಕಾರಿಗಳು ದೂರಿದ್ದಾರೆ. ಗುತ್ತಿಗೆದಾರನಿಗೆ ಫೋನ್ ಮಾಡಿದರೂ ಸ್ವೀಕರಿಸುವು ದಿಲ್ಲವೆನ್ನ ಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ನೀಡಲು ತೀರ್ಮಾನಿಸಿರುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page