ಪತ್ತನಂತಿಟ್ಟ: ಶಬರಿಮಲೆ ತೀರ್ಥಾಟನಾ ಋತು ಆರಂಭಗೊAಡಿರುವAತೆ ಕ್ಷೇತ್ರಕ್ಕೆ ಭಕ್ತರ ಮಹಾಪ್ರವಾಹವೇ ಹರಿದು ಬರತೊಡಗಿದೆ. ಇದರಿಂದಾಗಿ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ. ಮಾತ್ರವಲ್ಲ ಭಾರೀ ಅವ್ಯವಸ್ಥೆಯೂ ಉಂಟಾಗಿದೆ. ನಿನ್ನೆ ಮಾತ್ರವಾಗಿ 1,96,594 ಮಂದಿ ಭಕ್ತರು ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ್ದಾರೆ.
ವರ್ಚುವಲ್ ಕ್ಯೂ ಮೂಲಕ ದೈನಂದಿನ 70000 ಮಂದಿಗೆ ಹಾಗೂ ಸ್ಪೋಟ್ ಬುಕ್ಕಿಂಗ್ ಮೂಲಕ 20,000 ಮಂದಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಸ್ಪೋಟ್ ಬುಕ್ಕಿಂಗ್ ಮೂಲಕ ದರ್ಶನ ಪಡೆಯಲು ಈಗ 30,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ನಿಬಿಡತೆ ಸ್ಥಿತಿಯನ್ನು ನಿಯಂತ್ರಿಸಲು ಇಂದಿನಿAದ ಸ್ಪೋಟ್ ಬುಕ್ಕಿಂಗ್ ಮೂಲಕ 20,000ಕ್ಕಿಂತ ಹೆಚ್ಚು ಭಕ್ತರು ಆಗಮಿಸಿದ್ದಲ್ಲಿ ಅವರಿಗೆ ದರ್ಶನಭಾಗ್ಯ ಲಭಿಸದೆಂದು ಪೊಲೀಸರು ತಿಳಿಸಿದ್ದಾರೆ.
ಶಬರಿಮಲೆ ತೀರ್ಥಾಟನೆಗಾಗಿ ನಿನ್ನೆ ಬಂದ ಕಲ್ಲಿಕೋಟೆ ಕೊಲಾಂಡಿ ಚೆಂuಟಿಜeಜಿiಟಿeಜಟ್ಕಡವು ಎಡಕುಳಂನ ಸತಿ (60) ಎಂಬವರು ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಪತ್ತನಂತಿಟ್ಟ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತಿ ಸದಾನಂದನ್ ಮತ್ತು ಸಂಬAಧಿಕ ರೊಂದಿಗೆ ನಿನ್ನೆ ಶಬರಿಮಲೆ ದೇಗುಲ ದರ್ಶನಕ್ಕಾಗಿ ಬಂದಿದ್ದರು. ಶಬರಿಮಲೆಯಲ್ಲಿ ಅಭೂತಪೂರ್ವ ಭಕ್ತರ ಸಂದಣಿಯಿAದಾಗಿ ದೇವರ ದರ್ಶನ ಪಡೆಯಲು ಸಾಧ್ಯವಾಗದೆ ಅದೆಷ್ಟೋ ಮಂದಿ ಅಲ್ಲಿಂದ ಹಿಂತಿರುಗಬೇಕಾದ ಸ್ಥಿತಿಯೂ ಈಗ ನಿರ್ಮಾಣವಾಗಿದೆ. ಪಾರಿಕುಳಂನಿAದ ಶಬರಿಮಲೆ ದರ್ಶನಕ್ಕಾಗಿ ನಿನ್ನೆ ಆಗಮಿಸಿದ್ದ ಮಹಿಳೆಯರು ಸೇರಿ 12 ಮಂದಿಯ ತಂಡಕ್ಕೆ ದರ್ಶನ ಪಡೆಯಲು ಸಾಧ್ಯವಾಗದೆ ಅವರು ಅಲ್ಲಿಂದ ಪಂದಳAಗೆ ತಲುಪಿ ತುಪ್ಪದ ಅಭಿಷೇಕ ನಡೆಸಿ ಅಲ್ಲೇ ತಮ್ಮ ಮಾಲೆಗಳನ್ನು ತೆಗೆದು ಊರಿಗೆ ಮರಳಬೇಕಾಗಿ ಬಂದಿದೆ.
ದೇವಸ್ಥಾನದ ಬಾಗಿಲು ತೆರೆದ ಎರಡೇ ದಿನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರನ್ನು ನಿಯಂತ್ರಿಸಲು ತಿರುವಿದಾಂಕೂರ್ ಮುಜರಾಯಿ ಮಂಡಳಿ ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಒಂದೆಡೆ ಕೊರೆಯುವ ಚಳಿ, ಇನ್ನೊಂದೆಡೆ ಪದೇ ಪದೇ ಸುರಿಯುತ್ತಿರುವ ಮಳೆಯ ನಡುವೆಯೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲ ಸ್ಥಳದಿಂದ ಆರಂಭಗೊAಡು ಪಂಪಾತನಕ ಭಕ್ತರ ಭಾರೀ ಸರದಿ ಸಾಲು ನಿರ್ಮಾಣವಾಗುತ್ತಿದೆ. ಇದರಿಂದ ಭಕ್ತರು ದರ್ಶನ ಪಡೆಯಲು 10 ಗಂಟೆಗೂ ಹೆಚ್ಚು ಕಾಲ ಸರದಿಸಾಲಿನಲ್ಲಿ ನಿಂತು ಕಾಯಬೇಕಾದ ಸ್ಥಿತಿಯೂ ಉಂಟಾಗಿದೆ. ಇದರಿಂದಾಗಿ ಮುಜರಾಯಿ ಮಂಡಳಿ ಮತ್ತು ಪೊಲೀಸ್ ಇಲಾಖೆ ಇಂದಿನಿAದ ಹೊಸ ನಿಯಂತ್ರಣ ಕ್ರಮ ಆರಂಭಿಸಿದೆ.







