ಉಪ್ಪಳ: ಸಮುದ್ರ ವೀಕ್ಷಿಸಲು ತಲುಪಿದ ವೇಳೆ ಬಲವಾದ ಅಲೆಯಲ್ಲಿ ಸಿಲುಕಿ ನಾಪತ್ತೆಯಾದ ಯುವಕನ ಪತ್ತೆಗಾಗಿ ಶೋಧ ಮುಂದುವರಿಯುತ್ತಿದೆ. ಮಂಜೇಶ್ವರ ಚೌಕಿ ನಿವಾಸಿ ಉಮರುಲ್ ಫಾರೂಕ್ ಎಂಬವರ ಪುತ್ರ ಮೊಹಮ್ಮದ್ ಸೈನುಲ್ ಆಬಿದ್ (18) ಎಂಬಾತನಿಗಾಗಿ ಶೋಧ ನಡೆಯುತ್ತಿದೆ. ಮೊಹಮ್ಮದ್ ಸೈನುಲ್ ಆಬಿದ್ ತಾಯಿ ಹಾಗೂ ಕುಟುಂಬ ಸಮೇತ ನಿನ್ನೆ ಸಂಜೆ ಕುಂಡುಕೊಳಕೆ ಬೀಚ್‌ಗೆ ಬಂದಿದ್ದರು. ಸಮುದ್ರ ಬದಿಯಲ್ಲಿ ನಿಂತಿದ್ದ ಮೊಹಮ್ಮದ್ ಸೈನುಲ್ ಆಬಿದ್ ಹಾಗೂ ಈತನ ಸಹೋದರಿ ಅಲೆಯಲ್ಲಿ ಸಿಲುಕಿದ್ದು, ಈ ವೇಳೆ ಜತೆಗಿದ್ದವರ ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಸಹೋದರಿಯನ್ನು ರಕ್ಷಿಸಲು ಸಾಧ್ಯವಾಗಿದ್ದು, ಮೊಹಮ್ಮದ್ ಸೈನುಲ್ ಆಬಿದ್‌ನನ್ನು ರಕ್ಷಿಸಲಾಗಲಿಲ್ಲ. ಮಾಹಿತಿ ಲಭಿಸಿದ ಮಂಜೇಶ್ವರ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಕುಂಬಳೆ ಕರಾವಳಿ ಪೊಲೀಸರು ಕೂಡಲೇ ತಲುಪಿ ಶೋಧ ಕಾರ್ಯ ಆರಂಭಿಸಿದ್ದರು. ರಾತ್ರಿಯಿಡೀ ಸಮುದ್ರದಲ್ಲಿ ಹುಡುಕಾಟ ನಡೆಸಿದರೂ ಮೊಹಮ್ಮದ್ ಸೈನುಲ್ ಆಬಿದ್‌ನನ್ನು ಪತ್ತೆಹಚ್ಚಲಾಗಲಿಲ್ಲ. ಇದರಿಂದ ಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಪುನರಾರಂಭಿಸಲಾಗಿದೆ.






