ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ನೆಲ್ಲಿಕುಂಜೆ ಕಡಪ್ಪುರ ನಿವಾಸಿಯಾದ ರತೀಶ್ (42) ಎಂಬಾತ ಸೆರೆಗೀಡಾದ ಆರೋಪಿ. ಮಹಿಳಾ ಪೊಲೀಸ್ ಠಾಣೆ ಎಸ್‌ಐ ಕೆ. ಅಜಿತರ ನೇತೃತ್ವದಲ್ಲಿ ಮಲಪ್ಪುರಂ ಕುಟ್ಟಿಪ್ಪುರದಿಂದ ಅತೀ ಸಾಹಸಿಕವಾಗಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಗೆ ಆರೋಪಿ ಕಿರುಕುಳ ನೀಡಿದಾನ. ೨೦೨೦ರಲ್ಲಿ ಹಾಗೂ ಬಳಿಕ ಹಲವು ಬಾರಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. ೨೦೨೧ರಲ್ಲಿ ದಾಖಲಿಸಿಕೊಂಡ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ವೇಳೆ ಜಾಮೀನಿನಲ್ಲಿ ಬಿಡುಗಡೆಗೊಂಡ ಆರೋಪಿ ಬಳಿಕ ತಲೆಮರೆ ಸಿಕೊಂಡಿದ್ದನು. ಇದರಿಂದ ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಎನ್. ರಾಜೇಶ್, ದೀಪಕ್, ಸಿಪಿಒಗಳಾದ ಶ್ರುತಿ, ಜೆ. ಸಜೀಶ್,ಸೂರಜ್ ಎಂಬಿವರನ್ನೊಳಗೊಂಡ ತಂಡ ಹಾಗೂ ತಿರೂರು ಡಾನ್ಸಾಪ್ ಟೀಂ ಸೇರಿ ಆರೋಪಿಯನ್ನು ಸೆರೆಹಿಡಿದಿದೆ.







