ಕುಂಬಳೆಯಲ್ಲಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಓರ್ವ ಆರೋಪಿ ಚೆನ್ನೈಯಲ್ಲಿ ಸೆರೆಗೀಡಾದ ಬೆನ್ನಲ್ಲೇ ಇತರ 6 ಮಂದಿ  ಪೊಲೀಸರ ಮುಂದೆ ಶರಣು

ಕುಂಬಳೆ: ಕುಂಬಳೆ ಕೃಷ್ಣನಗರ ಸಮೀಪ ಯುವಕನನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಓರ್ವ ಆರೋಪಿ ಸೆರೆಗೀಡಾದ ಬೆನ್ನಲ್ಲೇ ಇತರ ಆರು ಮಂದಿ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.

ಕುಂಟಂಗೇರಡ್ಕ ನಿವಾಸಿಗಳಾದ ಮುಹಮ್ಮದ್ ಹಾಶಿಂ ಯಾನೆ ಆಶಿಂ, ಅಬು ಜಾಸಿಂ ಯಾನೆ ಜಾಸಿ, ರಮೀಸ್ ರೋಷಲ್ ಫಿರೋಸ್ ಯಾನೆ ರಮೀಸ್, ಮಿನ್‌ಹಾಜ್ ಅಬ್ದುಲ್ಲ ಇ.ಕೆ ಯಾನೆ ಮಿನ್‌ಹಾಜ್, ಫಸಲ್ ರಹ್ಮಾನ್ ಯಾನೆ ಪಜಿಲು,  ಮೊಹಿಯು ದ್ದೀನ್ ನಿಹಾಲ್ ಯಾನೆ ನಿಹಾಲ್ ಎಂಬಿ ವರು ಕುಂಬಳೆ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್‌ರ ಮುಂದೆ ಶರಣಾಗಿದ್ದಾರೆ.

ಮಾರ್ಚ್ ೩೦ರಂದು ರಾತ್ರಿ 12 ಗಂಟೆಗೆ ಕುಂಬಳೆ-ಬದಿಯಡ್ಕ ರಸ್ತೆಯ ಕೃಷ್ಣ ನಗರ ಸಮೀಪದ ಬಸ್ ವೈಟಿಂಗ್ ಶೆಡ್    ಬಳಿ ಕುಂಬಳೆ ಮಾಟಂಗುಳಿಯ ಅಫ್ಸಾನ್ ಫಹದ್ (19)ನ ಮೇಲೆ ಹಲ್ಲೆಗೈದು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದ ಆರೋಪಿಗಳು ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಬೋವಿಕ್ಕಾನ ಮುದಲಪ್ಪಾರೆಯ ಅಮೀನ್ ಸಫ್ವಾನ್ (21) ಇತ್ತೀಚೆಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದನು. ಪೊಲೀಸರು ಈ ಹಿಂದೆ ಬಿಡುಗಡೆಗೊಳಿಸಿದ ನೋಟೀಸಿನ ಪ್ರಕಾರ ಅಮೀನ್ ಸಫ್ವಾನ್‌ನನ್ನು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದು ನಿಲ್ಲಿಸಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಎಸ್‌ಐ ಸನಿತ್‌ರ ನೇತೃತ್ವದಲ್ಲಿ ಪೊಲೀಸರು ಚೆನ್ನೈಗೆ ತೆರಳಿ ಆರೋಪಿಯನ್ನು ಕಸ್ಟಡಿಗೆ ತೆಗೆದು ನಿನ್ನೆ ಸಂಜೆ ಕುಂಬಳೆಗೆ ತಲುಪಿಸಿ ಬಂಧನ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಇತರ ಆರೋಪಿಗಳಾದ ಆರು ಮಂದಿ ಪೊಲೀಸರ ಮುಂದೆ ಶರಣಾಗಿದ್ದಾರೆ.  ಪ್ರಕರಣದ ಇನ್ನೋರ್ವ ಆರೋಪಿ ಕುಂಟಂಗೇರಡ್ಕದ ಮುಹಮ್ಮದ್ ಅನಸ್ ಈ ಹಿಂದೆ ಸೆರೆಗೀಡಾಗಿದ್ದನು.

RELATED NEWS

You cannot copy contents of this page