ಕುಂಬಳೆ ಪೇಟೆಯಲ್ಲಿ ಬೀದಿ ನಾಯಿಗಳ ಉಪಟಳ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಬೀದಿ ನಾಯಿಗಳು ತುಂಬಿಕೊಂಡಿದ್ದು, ಇದರಿಂದ  ಜನರಿಗೆ ನಡೆದಾಡಲಾಗದ ಸ್ಥಿತಿ ಉಂಟಾಗಿದೆ.  ಕಾಸರಗೋಡು-ಮಂಗಳೂರು ಭಾಗಕ್ಕೆ ತೆರಳುವ ಬಸ್ ವೈಟಿಂಗ್ ಶೆಡ್ ಸಮೀಪ  ಸಹಿತ ಪೇಟೆಯ ವಿವಿಧೆಡೆ ಹಲವು ನಾಯಿಗಳು  ಬೀಡುಬಿಟ್ಟಿವೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಬಸ್ ಪ್ರಯಾಣಿಕರಿಗೆ ನಡೆದಾಡಲು ಭಯ ಪಡಬೇಕಾದ ಸ್ಥಿತಿ ಉಂಟಾಗಿದೆ.  ಕುಂಬಳೆ ಪೇಟೆಯಲ್ಲಿ ಕಳೆದ ಹಲವು ಕಾಲದಿಂದ ಬೀದಿ ನಾಯಿಗಳು ತುಂಬಿಕೊಂಡು  ಜನರಿಗೆ ಆತಂಕ ಸೃಷ್ಟಿಸುತ್ತಿದ್ದು ಈಗಾಗಲೇ ಹಲವು ಮಂದಿಗೆ   ಕಡಿತವುಂಟಾಗಿದೆ. ಬೀದಿ ನಾಯಿಗಳ ಉಪಟಳಕ್ಕೆ ಪರಿಹಾರ ಕಾಣಬೇ ಕೆಂದು ಒತ್ತಾಯಿಸಿ ಸಾರ್ವಜನಿಕರು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲವೆಂಬ ದೂರು ಕೇಳಿಬಂದಿದೆ. ಇದೇ ವೇಳೆ ಇಂದು  ಬೀದಿ ನಾಯಿಗಳಿಗೆ ಚುಚ್ಚುಮದ್ದು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ. ಆದರೆ ಬೀದಿ ನಾಯಿಗಳಿಗೆ ಚುಚ್ಚುಮದ್ದು ನೀಡಿದರೆ ಅವುಗಳ ದಾಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಬದಲಾಗಿ ಅವುಗಳನ್ನು ಹಿಡಿದು  ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

You cannot copy contents of this page