ಕೊಡುಂಗಲ್ಲೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಕಾಸರಗೋಡಿನ ವಸತಿಗೃಹದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕೊಡುಂಗಲ್ಲೂರಿನಿಂದ ನಾಪತ್ತೆಯಾದ ವಿದ್ಯಾರ್ಥಿ ನಗರದ ವಸತಿಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.   ತೃಶೂರು ಕೊಡುಂಗಲ್ಲೂರು ಅಳಿಕ್ಕೋಡು ತಾಪಿಲ್‌ನ ಟಿ. ಮೊಹಮ್ಮದ್ ನಸೀರ್ ಎಂಬವರ ಪುತ್ರ ಟಿ.ಎಂ. ಅಬ್ದುಲ್ ನಿಹಾಲ್   ಮೃತವ್ಯಕ್ತಿ ಎಂದು  ಪೊಲೀಸರು ನಡೆಸಿದ  ತನಿಖೆಯಲ್ಲಿ ಗುರುತಿಸಲಾಗಿದೆ. ಈತ ಅಕ್ಟೋಬರ್ 14ರಂದು ನಾಪತ್ತೆಯಾಗಿರುವುದಾಗಿ ಮನೆಯವರು ಕೊಡುಂಗಲ್ಲೂರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ  ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಶೋಧ ಆರಂಭಿಸಿದ್ದರು. ಈಮಧ್ಯೆ  ನಿಹಾಲ್ ಕಾಸರಗೋಡಿಗೆ ಬಂದು ನಗರದ ಬ್ಯಾಂಕ್ ರಸ್ತೆ ಬಳಿಯ ವಸತಿಗೃಹದ  ಕೊಠಡಿ  ಬಾಡಿಗೆಗೆ ಪಡೆದುಕೊಂಡಿದ್ದನು. ರೂಮ್ ಬಾಯ್ ನಿನ್ನೆ ಸಂಜೆ   ಕೊಠಡಿಯ ಬಾಗಿಲು ಬಡಿದಾಗ  ತೆರೆಯದಿರು ವುದನ್ನು ಗಮನಿಸಿ ಕಿಟಿಕಿ ಮೂಲಕ ನೋಡಿದಾಗ  ನಿಹಾಲ್ ಕೊಠಡಿಯೊಳಗಿನ ಫ್ಯಾನ್‌ಗೆ  ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದನು. ಆ ಬಗ್ಗೆ ರೂಮ್ ಬಾಯ್ ನೀಡಿದ ದೂರಿನಂತೆ   ಪೊಲೀಸರು ಸ್ಥಳಕ್ಕಾಗಮಿಸಿ  ಮಹಜರು ನಡೆಸಿ ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಸಾಗಿಸಿದರು. ವಿಷಯ ತಿಳಿದು ಮನೆಯವರು ಕಾಸರಗೋಡಿಗೆ ಆಗಮಿಸಿದ್ದಾರೆ. ನಿಹಾಲ್‌ನ ಸಾವಿಗೆ ಕಾರಣ ಸ್ಪಷ್ಟಗೊಂಡಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page