ನವದೆಹಲಿ: ಅಸ್ಸಾಂನ ಕರ್ಬಿ ಆಂಗ್ಲಾಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆದ ಸುಖೋಯ್ 30 ಜೆಟ್ ವಿಮಾನ ಪಥನಗೊಂಡು ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಈ ಜೆಟ್ ವಿಮಾನ ಜೋಹರ್ಟ್‌ನಿಂದ ಟೇಕ್ ಆಫ್ ಆದ ಸ್ವಲ್ಪ ಸಮ ಯದ ಬಳಿಕ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡಿತ್ತು. ನಂತರ ಆ ಬಗ್ಗೆ ಶೋಧ ನಡೆಸಿದಾಗ ವಿಮಾನ ಸುಮಾರು 60 ಕಿ.ಮೀ. ದೂರದಲ್ಲಿರುವ ಅಂಗ್ಲಾಂಗ್‌ನಲ್ಲಿ ಪಥನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಪೈಲೆಟ್‌ಗಳಾದ ಸ್ಕ್ವಾಡನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿರುವುದಾಗಿ ಐಎಎಫ್ ಅಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.







