ಬೇಸಿಗೆ ಧಗೆಗೆ ತಂಪೆರೆಯಲು ಬರಲಿದೆ ಬೇಸಿಗೆ ಮಳೆ: ಎ. 29ರಂದು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

ಕಾಸರಗೋಡು: ರಾಜ್ಯದಲ್ಲಿ ಬೇಸಿಗೆ ಧಗೆ ಹೆಚ್ಚಾಗುತ್ತಿರುವ ಜತೆಗೆ ರಾಜ್ಯದಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಸಾಮಾನ್ಯವಾದ ರೀತಿಯಲ್ಲಿ ಬೇಸಿಗೆ ಮಳೆ ಸುರಿಯಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ.

ದಕ್ಷಿಣ ಕೇರಳದ ಕೆಲವೆಡೆ ಗಳಲ್ಲಿ ಇಂದು ಬೆಳಿಗ್ಗೆ ಬೇಸಿಗೆ ಮಳೆ ಸುರಿದಿದೆ. ಕಾಸರಗೋಡು ಸೇರಿದಂತೆ   ಇತರ ಜಿಲ್ಲೆಗಳಲ್ಲಿ  ಮುಂದಿನ ಎರಡು ದಿನಗಳಲ್ಲಿ ಬೇಸಿಗೆ ಮಳೆ ಸುರಿಯುವ ಸಾಧ್ಯತೆ ಇದೆ.  ಎಪ್ರಿಲ್ 29ರಂದು ಕಾಸರಗೋಡು, ಕಣ್ಣೂರು, ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ತೀವ್ರ ಬೇಸಿಗೆ ಮಳೆ ಸುರಿಯುವ ಸಾಧ್ಯತೆಯಿದ್ದು, ಅದರಿಂದಾಗಿ ಈ ನಾಲ್ಕು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.  ರಾಜ್ಯದಲ್ಲಿ ತಾಪಮಾನ ಮಟ್ಟ ಈಗ 39.8 ಡಿಗ್ರಿ ಸೆಲ್ಶಿಯಸ್‌ಗೇರಿದೆ. ಕಾಸರಗೋಡು ಜಿಲ್ಲೆಯಲ್ಲೂ  ತಾಪಮಾನ ಮಟ್ಟ 38 ಡಿಗ್ರಿಗೇರಿದೆ. ಗರಿಷ್ಠ ಎಂಬಂತೆ ಪಾಲಕ್ಕಾಡ್ ಜಿಲ್ಲೆಯಲ್ಲಿ ತಾಪಮಾನಮಟ್ಟ 40 ಡಿಗ್ರಿಗೇರಿದೆ.

ತಾಪಮಾನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ದೈಹಿಕ ಸಮಸ್ಯೆ ಮಾತ್ರವಲ್ಲ ಮಾನಸಿ ಕವಾಗಿಯೂ ಹೀಟ್ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಇದೆ. ಹೃದ್ರೋಗ, ಮಧುಮೇಹ, ಚರ್ಮರೋಗ ಮತ್ತು ಅರ್ಬುದ ದಂತಹ ರೋಗಗಳಿರುವ ವರು ಈ ಸಂದರ್ಭದಲ್ಲಿ ಹೆಚ್ಚಿನ ಗಮನಹರಿ ಸಬೇಕು ಮಾತ್ರವಲ್ಲ ಗರ್ಭಿಣಿಯರು, ಎದೆಹಾಲು ಉಣಿಸುತ್ತಿರುವ ತಾಯಂದಿರು, ಮಕ್ಕಳು ಮತ್ತು ಆಲ್ಬನಿಸಂ ರೀತಿಯ ರೋಗದಿಂದ ಬಳಲುತಿರುವವರು ಸ್ವಯಂ ಲಾಕ್‌ಡೌನ್ ಏರ್ಪಡಿಸಬೇಕೆಂದು ಆರೋಗ್ಯ ಇಲಾಖೆ ಇನ್ನೊಂದೆಡೆ ಸಲಹೆ ನೀಡಿದೆ.

You cannot copy contents of this page