ಕಾಸರಗೋಡು: ರೈಲಿನಲ್ಲಿ ನಿದ್ರಿಸುತ್ತಿದ್ದ ಕಾಸರಗೋಡು ನಿವಾಸಿಯ ಮೊಬೈಲ್ ಫೋನ್ ಕಳವುಗೈದ ಕಳ್ಳನನ್ನು ಗಂಟೆಗಳೊಳಗೆ ರೈಲ್ವೇ ಪೊಲೀಸರು ಸೆರೆ ಹಿಡಿದಿದ್ದಾರೆ. ತಮಿಳುನಾಡು ಕನ್ಯಾಕುಮಾರಿ ನಿವಾಸಿ ಇ. ಸುರೇಶ್ (47) ಸೆರೆಯಾದವ. ಇತ್ತೀಚೆಗೆ ಕಾಸರಗೋಡು ನಿವಾಸಿ ಹಾಶಿಂ ಬಂಬ್ರಾಣಿಯವರ ಮೊಬೈಲ್ ಫೋನನ್ನು ಆರೋಪಿ ರೈಲಿನಿಂದ ಕಳವುಗೈದಿದ್ದನು. ಎರ್ನಾಕುಳಂನಿಂದ ಒಕೆ ಎಕ್ಸ್ಪ್ರೆಸ್ನಲ್ಲಿ ಕಾಸರಗೋಡಿಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಹಾಶಿಂ ಬಂಬ್ರಾಣಿ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು.







