ಸೂರ್ಯಾಘಾತವೆಂಬ ಶಂಕೆ: ಕಾರಡ್ಕದಲ್ಲಿ ಗೇರುಬೀಜ ಸಂಗ್ರಹಿಸಲು ತೆರಳಿದ್ದ ವೃದ್ಧ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಗೇರುಬೀಜ ಹೆಕ್ಕಲೆಂದು ಹೋಗಿದ್ದ ವೃದ್ಧ ಗೇರು ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಣ್ಣೂರು ಉದಯಗಿರಿ ಆಲಕ್ಕೋಡ್ ನಿವಾಸಿ, ಕಾರಡ್ಕ ಪಂಚಾಯತ್‌ನ ನೆಚ್ಚಿಪಡ್ಪು ನೀರೋಳಿಪಾರದಲ್ಲಿ  ವಾಸವಾಗಿ ರುವ ಎ.ಡಿ. ದೇವಸ್ಯ (೭೨) ನಿಧನಹೊಂದಿದವರು. ನಿನ್ನೆ ಸಂಜೆ ೩  ಗಂಟೆಗೆ ದೇವಸ್ಯ ಗೇರುಬೀಜ ಹೆಕ್ಕಲು ಹೋಗಿದ್ದರೆನ್ನಲಾಗಿದೆ. ಸಂಜೆ ವೇಳೆಗೆ ಆ ದಾರಿಯಲ್ಲಿ ಹೋದವರು ದೇವಸ್ಯರನ್ನು ಅಸ್ವಸ್ಥ ಸ್ಥಿತಿಯಲ್ಲಿ ಕಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಘಟನೆಯಲ್ಲಿ ಆದೂರು ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಾತ್ರವೇ ಸಾವಿಗೆ ಕಾರಣವೇನೆಂದು ದೃಢೀಕರಿಸಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಪತ್ನಿ ಎಲ್ಸಿ, ಪುತ್ರ ಜಿನ್ಸ್ ಸೆಬಾಸ್ಟಿನ್ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದಾರೆ. ಅಲ್ಲಿಗೆ ತೆರಳಿದ್ದ ದೇವಸ್ಯ ಕಳೆದೆರಡು ದಿನಗಳ ಹಿಂದೆ ನೀರೋಳಿಪಾರೆಗೆ ಹಿಂತಿರುಗಿದ್ದರು. ಸೊಸೆ ಸೋನಿಯಾ, ಸಹೋದರ ಥೋಮಸ್ ಆಮಕ್ಕಾಟ್ (ಮುಂಡೋಳು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page