ಪೈವಳಿಕೆ: ಹಲವು ವರ್ಷ ಗಳಿಂದ ಟೈಲರ್ ಆಗಿ ದುಡಿಯುತ್ತಿದ್ದ ಎಂ.ಎಂ. ಟೈಲರ್ ಎಂದೇ ಕರೆಸಿಕೊಂಡಿದ್ದ ಮಳಿವ್ ಮುಂಡಪ್ಪ ಟೈಲರ್ (68) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ವಿಜಯ, ಮಕ್ಕಳಾದ ಮಹೇಶ್, ಸುಸ್ಮಿತಾ, ಅಳಿಯ ಗುರುರಾಜ್, ಸಹೋದರ ನಾರಾಯಣ, ಸಹೋದರಿ ಯರಾದ ಲಕ್ಷ್ಮೀ, ಲೀಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತರ ಮನೆಗೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ, ರಾಮ ಏದಾರ್, ನಬೀಸ, ರಫೀಕ್ ಬಾಯಿಕಟ್ಟೆ, ಬಾಬು ವಾದ್ಯಪಡ್ಪು, ಅಬ್ದುಲ್ಲ ಕೆ, ಹುಸೈನ್ ಮಾಸ್ತರ್ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಸಿಪಿಎಂ ಲೋಕಲ್ ಸಮಿತಿ, ಬಾಯಿಕಟ್ಟೆ ಫಸ್ಟ್, ಸೆಕೆಂಡ್, ಅಟ್ಟೆಗೋಳಿ ಬ್ರಾಂಚ್ ಸಮಿತಿಗಳು, ಸಿಐಟಿಯು ಪಂ. ಸಮಿತಿ ಸಂತಾಪ ಸೂಚಿಸಿವೆ.






