ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಅಧ್ಯಾಪಕನಿಗೆ ಏಳು ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಅಧ್ಯಾಪಕನಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶ ರಾದ ಕೆ. ಸಂತೋಷ್ ಕುಮಾರ್ ವಿವಿಧ ಸೆಕ್ಷನ್‌ಗಳಲ್ಲಾಗಿ ೭ ವರ್ಷಕಠಿಣ ಸಜೆ ಹಾಗೂ ೭೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಎನ್‌ಸಿಸಿ ಇನ್‌ಸ್ಟ್ರಕ್ಟರ್ ಹಾಗೂ ಅಧ್ಯಾಪಕನೂ ಆಗಿರುವ ಮೈರೆ ಗ್ರಾಮದ ಬಿಸ್ಮಿಲ್ಲಾ ಮಂಜಿಲ್‌ನ ಇಬ್ರಾಹಿಂ ಎಂ (54) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪೋಕ್ಸೋ ಆಕ್ಟ್ ಪ್ರಕಾರ ಆರೋಪಿಗೆ 5 ವರ್ಷ ಕಠಿಣ ಸಜೆ ಮತ್ತು 50,000  ರೂ. ಜುಲ್ಮಾನೆ  (ಜುಲ್ಮಾನೆ ಪಾವತಿಸದಿದ್ದಲ್ಲಿ ನಾಲ್ಕು ತಿಂಗಳ ಹೆಚ್ಚುವರಿ ಸಜೆ) ಹಾಗೂ ಜೆ.ಜೆ. ಆಕ್ಟ್ ಪ್ರಕಾರ ಎರಡು ವರ್ಷ  ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ (ಜುಲ್ಮಾನೆ ಪಾವತಿಸದಿದ್ದಲ್ಲಿ ಎರಡು ತಿಂಗಳ ಹೆಚ್ಚುವರಿ ಸಜೆ) ಸೇರಿದಂತೆ ಆರೋಪಿಗೆ ಒಟ್ಟು ೭ ವರ್ಷ ಸಜೆ ಹಾಗೂ 7೦,೦೦೦ ರೂ. ಜುಲ್ಮಾನೆ ವಿಧಿಸಲಾಗಿದೆ.

2022 ನವಂಬರ್ 22ರಂದು ಸಂಜೆ ಅಪ್ರಾಪ್ತೆಗೆ ಶಾಲೆಯ ಎನ್‌ಸಿಸಿ ಕೊಠಡಿಯೊಳಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಅಧ್ಯಾಪಕನ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಂದು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐಯಾಗಿದ್ದ ವಿಷ್ಣು ಪ್ರಸಾದ್ ಎಂ.ವಿ ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶರಣ್ಯಾ ಎಂ.ವಿ ನ್ಯಾಯಾಲಯದಲ್ಲಿ ದೋಷಾರೋ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್  ಪ್ರಿಯಾ ಎ.ಕೆ. ನ್ಯಾಯಾಲಯದಲ್ಲಿ  ವಾದಿಸಿದ್ದರು.

RELATED NEWS

You cannot copy contents of this page