ತಿರುವನಂತಪುರ: ಶಾಸಕರಾಗಿ ಆಯ್ಕೆಯಾದ ಕಲ್ಲಟ್ರ ಮಾಹಿನ್ ಹಾಜಿಯವರ ವಿನಂತಿ ಮೇರೆಗೆ ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇರವಾಗಿ ಮಧ್ಯಪ್ರವೇಶಿಸಿ ಕಲ್ಲಡ್ಕ-ಚೆರ್ಕಳ ರಸ್ತೆ ಅಭಿವೃದ್ಧಿಗೆ 29.83 ಕೋಟಿ ರೂ.ಗಳ ಟೆಂಡರ್ ಕ್ರಮಗಳನ್ನು ಅಂಗೀಕರಿಸಲಾಗಿದೆ. ಈ ಮೊದಲು ಆಡಳಿತಾನುಮತಿ ಲಭಿಸಿಯೂ ತಾಂತ್ರಿಕ ಕಾರಣ ಹೇಳಿ ಕೈ ಬಿಡಲಿರುವ ಯತ್ನ ನಡೆಯುತ್ತಿದ್ದ ಮಧ್ಯೆ ಮುಖ್ಯಮಂತ್ರಿಯ ಈ ಮಧ್ಯಪ್ರವೇಶದಿಂದಾಗಿ ಅನುಕೂಲ ಕ್ರಮ ಉಂಟಾಗಿದೆ. ಕಿಲೋ ಮೀಟರ್ 33/000, 52/190 ವರೆಗಿರುವ ಭಾಗದಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಪೂರ್ತಿಗೊಳಿ ಸಲಾಗಿತ್ತು. ಪ್ರಸ್ತುತ ರಸ್ತೆಯ ಬಿಸಿ ಕಾಮಗಾರಿಗೆ ಬೇಕಾಗಿ 29.83 ಕೋಟಿ ರೂ.ಗಳ ಎಸ್ಟಿಮೇಟ್‌ಗೆ ಟೆಂಡರ್ ಕ್ರಮ ಪೂರ್ತಿಗೊಳಿಸ ಲಾಗಿದೆ. ಕಿಫ್‌ಬಿ ಸಿಇಒ ಮಿನಿ ಆಂಟನಿ, ಕೆ.ಆರ್.ಎಫ್.ಬಿ ಪ್ರಾಜೆಕ್ಟ್ ಡೈರಕ್ಟರ್ ಅಶೋಕ್ ಕುಮಾರ್ ಎಂಬಿವರೊಂದಿಗೆ ಕಲ್ಲಟ್ರ ಮಾಹಿನ್ ಚರ್ಚೆ ನಡೆಸಿದರು. ಜಾಸ್ಮಿನ್ ಕನ್‌ಸ್ಟ್ರೇಶನ್ ಕಂಪೆನಿ ಕಾಮಗಾರಿ ವಹಿಸಿಕೊಂಡಿದೆ. ಈ ವೇಳೆ ಮಾಹಿನ್ ಕೇಳೋಟ್ ಜೊತೆಗಿದ್ದರು.





