ಹೊಸದುರ್ಗ: ಕೋಟಚ್ಚೇರಿ ಟ್ರಾಫಿಕ್ ಸರ್ಕಲ್ ಸಮೀಪದ ಬದ್ರಿಯಾ ಮಸೀದಿಯಲ್ಲಿ ಸ್ಥಾಪಿಸಿದ್ದ ಕಾಣಿಕೆ ಹುಂಡಿ ಕೆಡವಿ ಹಣ ಕಳವು ನಡೆಸಿದ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮಸೀದಿ ಪರಿಸರದಲ್ಲಿ ಸ್ಥಾಪಿಸಿದ್ದ ಕ್ಯಾಮರಾದಲ್ಲಿ ಆರೋಪಿಯೆಂದು ಸಂಶಯಿಸುವ ವ್ಯಕ್ತಿಯ ದೃಶ್ಯಗಳು ಸೆರೆಯಾಗಿದ್ದು ಅದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಚಿತ್ರದಲ್ಲಿ ಕಾಣುವ ವ್ಯಕ್ತಿಯ ಕುರಿತು ಮಾಹಿತಿ ಲಭಿಸಿದವರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಹೊಸದುರ್ಗ ಠಾಣೆಗೆ ಮಾಹಿತಿ ನೀಡಬೇಕಾಗಿ ಪೊಲೀಸರು ವಿನಂತಿಸಿದ್ದಾರೆ.






