ಭಾಸ್ಕರ ಕುಂಬಳೆ ಬಲಿದಾನ ದಿನಾಚರಣೆ ಇಂದು

ಕುಂಬಳೆ: ಡಿವೈಎಫ್‌ಐ  ನೇತಾರನಾಗಿದ್ದ ಭಾಸ್ಕರ ಕುಂಬಳೆಯವರ  ಬಲಿದಾನ ದಿನಾಚರಣೆಯಂಗವಾಗಿ ಇಂದು ಸಂಜೆ 4 ಗಂಟೆಗೆ ಕುಂಬಳೆಯಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ . ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ. ಸ್ವರಾಜ್ ಉದ್ಘಾಟಿಸುವರು. ಇಂದು ಬೆಳಿಗ್ಗೆ ಶೇಡಿಕಾವಿನಲ್ಲಿರುವ ಸ್ಮೃತಿ ಮಂಟಪದಲ್ಲಿ  ಪುಷ್ಪಾರ್ಚನೆ ನಡೆಸಲಾಯಿತು. ಶಾಸಕ ಸಿ.ಎಚ್. ಕುಂಞಂಬು, ನೇತಾರರಾದ ವಿ.ವಿ. ರಮೇಶ್, ರಾಜೇಶ್ ವಲಾಟ್, ರಘುದೇವ್ ಮಾಸ್ತರ್, ಕೆ.ಆರ್. ಜಯಾನಂದ, ಸಿ.ಎ.ಸುಬೈರ್, ಶಾಲು ಮ್ಯಾಥ್ಯು ಮೊದಲಾದವರು ಭಾಗವಹಿಸಿದರು.

RELATED NEWS

You cannot copy contents of this page