ಪುತ್ತಿಗೆ: ಸಂಘಪರಿವಾರದ ಹಿರಿಯ ಕಾರ್ಯಕರ್ತ, ಬಿಜೆಪಿ ಸದಸ್ಯ ಮುಗು ಸಮೀಪದ ಚೇವಾ ನಿವಾಸಿ ತ್ಯಾಂಪಣ್ಣ ಭಂಡಾರಿ (76) ನಿಧನ ಹೊಂದಿದರು. ಕೃಷಿಕರಾಗಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.
ಮುಂಡಿತ್ತಡ್ಕ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಸದಸ್ಯರಾಗಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಗಾರರಾಗಿದ್ದ ಇವರು ಪುತ್ತಿಗೆ ಎಸ್‌ಕೆಎಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಹಿರಿಯ ಸದಸ್ಯನಾಗಿದ್ದರು. ನಾಟಕ ನಟರಾಗಿರುವ ಇವರು ಹಲವಾರು ತುಳು ನಾಟಕಗಳಲ್ಲಿ ಅಭಿನಯಿಸಿದ್ದರು. ಇವರ ಪತ್ನಿ ಪವನಾಕ್ಷಿ ೧೦ ವರ್ಷದ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ದುರ್ಗಾಪ್ರಸಾದ್ ಭಂಡಾರಿ, ಮಮತಾ, ವನಿತಾ, ಸೊಸೆ ವಿನಯ, ಅಳಿಯಂದಿರಾದ ರಾಜೇಶ್ ರೈ, ರತ್ನಾಕರ ಶೆಟ್ಟಿ, ಸಹೋದರ ಉಮಾನಾಥ ಭಂಡಾರಿ, ಸಹೋದರಿಯರಾದ ಲೀಲ, ವಿನೋದ, ಸುಧಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






