ಎಡಿಎಂ ಆಗಿ ಉದಯಕುಮಾರ್ ಪೆರ್ಲ ಅಧಿಕಾರ ಸ್ವೀಕಾರ

ಕಾಸರಗೋಡು: ಜಿಲ್ಲಾ ಹೆಚ್ಚುವರಿ ದಂಡನಾ ಧಿಕಾರಿ (ಎಡಿಎಂ)ಯಾಗಿ ಉದಯಕುಮಾರ್ ಪೆರ್ಲ ಶ್ರುತಿ ಕೆ.ವಿ ಅವರಿಂದ ಅಧಿಕಾರ ಸ್ವೀಕರಿಸಿದರು. 1997ರಲ್ಲಿ ಕಾಸರಗೋಡು ಭೂಸ್ವಾಧೀನ ಕಚೇರಿಯಲ್ಲಿ ಎಲ್.ಡಿ. ಕ್ಲರ್ಕ್ ಆಗಿ ಸರಕಾರಿ ಸೇವೆಗೆ ಸೇರ್ಪಡೆಯಾ ದರು. ಬಳಿಕ ಕಾಸರಗೋಡು ತಾಲೂಕು ಕಚೇರಿಯಲ್ಲಿ ಸೀನಿಯರ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದರು. 2006ರಲ್ಲಿ ಭಡ್ತಿ ಹೊಂದಿ ಗ್ರಾಮಾಧಿಕಾರಿಯಾಗಿ ಶೇಣಿ, ಆದೂರು, ಬದಿಯಡ್ಕ, ಕುಂಬ್ಡಾಜೆ ಹಾಗೂ ಬೇಳ ಗ್ರಾಮಗಳಲ್ಲಿ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
2014ರಲ್ಲಿ ಮತ್ತೊಮ್ಮೆ ಭಡ್ತಿ ಹೊಂದಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂನಿಯರ್ ಸೂಪರಿಂಟೆAಡೆAಟ್ ಆಗಿ ನೇಮಕಗೊಂಡರು. ನಂತರ ಮಂಜೇಶ್ವರ ತಾಲೂಕು ಕಚೇರಿ, ಎಲ್.ಎ.ಎನ್.ಎಚ್. ಕಾಸರಗೋಡು ಹಾಗೂ ಆರ್.ಡಿ. ಕಚೇರಿ ಕಾಸರಗೋಡಿನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 2020ರಲ್ಲಿ ಆರ್.ಡಿ. ಕಚೇರಿಯಲ್ಲಿ ಸೀನಿಯರ್ ಸೂಪರಿಂಟೆoಡೆoಟ್ ಆಗಿ ಕಾರ್ಯನಿರ್ವಹಿಸಿದರು. ಬಳಿಕ 2021ರಿಂದ 2025ರವರೆಗೆ ಕಾಸರಗೋಡು ಭೂ ನ್ಯಾಯಮಂಡಳಿಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದರು.
ಜಿಲ್ಲಾಡಳಿತದ “ಆಪರೇಶನ್ ಸ್ಮೈಲ್” ಯೋಜನೆ ಯಡಿ ಪಾವೂರು, ಉದ್ಯಾವರ ಹಾಗೂ ಕುಂಜತ್ತೂರು ಗ್ರಾಮ ವ್ಯಾಪ್ತಿಯ 135 ಕೊರಗ ಸಮುದಾಯದ ಕುಟುಂಬಗಳಿಗೆ ಕ್ರಯ ಪ್ರಮಾಣಪತ್ರಗಳನ್ನು ವಿತರಿಸುವ ಕಾರ್ಯ ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕಾಗಿ ಜಿಲ್ಲಾಧಿಕಾರಿಯ ‘ಉತ್ತಮ ಸೇವೆಗೆ ಇರುವ ಪ್ರಶಸ್ತಿ’ಗೆ ಭಾಜನರಾದರು. ಪೆರ್ಲದ ದಿ| ಮಾಧವ ಚೆಟ್ಟಿಯಾರ್ – ಶಾರದ ದಂಪತಿ ಪುತ್ರರಾಗಿದ್ದಾರೆ. ಪತ್ನಿ ಮುಳ್ಳೇರಿಯ ನಿವಾಸಿಯಾದ ಶ್ರೀಜಾ ಎಂ.ವಿ. ಕೃಷ್ಣ (ಎಚ್.ಎಸ್.ಎಸ್.ಟಿ., ಎನ್.ಎಚ್.ಎಸ್.ಎಸ್. ಪೆರಡಾಲ). ಮಕ್ಕಳು: ಅಜಯ್ ಸಾತ್ವಿಕ್ ಮತ್ತು ಶ್ರೀಲಕ್ಷ್ಮಿ (ವಿದ್ಯಾರ್ಥಿಗಳು). ಅಧಿಕಾರ ಸ್ವೀಕಾರದ ವೇಳೆ ಹುಜೂರ್ ಶಿರಸ್ತೆದಾರ್ ಸತೀಶ್ ಕುಮಾರ್, ಸೂಪರಿಂಟೆoಡೆoಟ್ ಲೋಕೇಶ್ ಎಂ.ಬಿ, ಅಧಿಕಾರಿಗಳು ಉಪಸ್ಥಿತರಿದ್ದರು.

RELATED NEWS

You cannot copy contents of this page