ವಾಣಿನಗರ ನಿವಾಸಿ ಪೈವಳಿಕೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಪೈವಳಿಕೆಯಲ್ಲಿರುವ ಸಹೋದರಿಯ ಮನೆಗೆ ತೆರಳಿದ್ದ ವಾಣಿನಗರ ಬಳಿಯ ಯುವಕ   ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಾಣಿನಗರ ಬಳಿಯ ಬೈಲಮೂಲೆ ನಿವಾಸಿ ದಿ| ನಾರಾಯಣ ನಾಯ್ಕರ ಪುತ್ರ ಬಾಲಕೃಷ್ಣ ನಾಯ್ಕ (40) ಮೃತಪಟ್ಟ ವ್ಯಕ್ತಿ.  ಬಾಲಕೃಷ್ಣ ನಾಯ್ಕ ನಿನ್ನೆ ಬೆಳಿಗ್ಗೆ ಪೈವಳಿಕೆಯ ಬೋಳಂಗಳದಲ್ಲಿರುವ ಸಹೋದರಿ ಸುನಿತಾರ ಮನೆಗೆ ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ಮನೆ ಬಳಿಯ ಶೆಡ್‌ನಲ್ಲಿ  ವಿಶ್ರಾಂತಿ ಪಡೆಯುವುದಾಗಿ ತಿಳಿಸಿ  ಬಾಲಕೃಷ್ಣ ತೆರಳಿದ್ದರೆನ್ನಲಾಗಿದೆ. ಅಪರಾಹ್ನ ೩ ಗಂಟೆ ವೇಳೆ ಮನೆಯವರು ನೋಡಿದಾಗ ಅವರು ಅಲ್ಲಿರಲಿಲ್ಲ. ಇದರಿಂದ ಹುಡುಕಾಡುತ್ತಿದ್ದಂತೆ ಶೆಡ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬಾಲಕೃಷ್ಣ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಮನೆಯವರು ಪೈವಳಿಕೆಯ ಆಸ್ಪತ್ರೆಗೂ ಬಳಿಕ ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಸಾವು ಸಂಭವಿಸಿತ್ತೆ ನ್ನಲಾಗಿದೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿರಿ ಸಿದ್ದು ಇಂದು ಮರಣೋತ್ತರ ಪರೀಕ್ಷೆ ಬಳಿಕ ಊರಿಗೆ  ಕೊಂಡೊಯ್ಯಲಾಗು ವುದೆಂದು ಸಂಬಂಧಿಕರು ತಿಳಿಸಿದ್ದಾರೆ.

 ರಬ್ಬರ್ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದ ಬಾಲಕೃಷ್ಣ ಅವಿವಾಹಿತರಾ ಗಿದ್ದರು.  ಮೃತರು ತಾಯಿ ಜಾನಕಿ, ಸಹೋದರ-ಸಹೋದರಿಯರಾದ ಬಾಲಚಂದ್ರ, ಸುನಿತ, ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page