ಕುಂಬಳೆ: ವಿನಾಯಕ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರಮಾದಾನದ ಮೂಲಕ ಮುಳಿಯಡ್ಕ- ನಾಯ್ಕಾಪು ರಸ್ತೆಯನ್ನು ಶುಚಿಗೊಳಿಸಲಾ ಯಿತು. ಕಾಡುಪೊದೆಗಳು ತುಂಬಿ ಅಪಾಯ ಒಡ್ಡುತ್ತಿದ್ದ ಈ ರಸ್ತೆಯನ್ನು ಕ್ಲಬ್ ಕಾರ್ಯಕರ್ತರು ಶುಚಿಗೊಳಿಸಿದರು. ಕಾಲ್ನಡೆ ಪ್ರಯಾಣಿಕರು ಹಾಗೂ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದ್ದ ರಸ್ತೆಗೆ ಬಾಗಿಗೊಂಡಿದ್ದ ಪೊದೆಗಳನ್ನು ತೆರವುಗೊಳಿ ಸಲಾಯಿತು. ಕ್ಲಬ್‌ನ ಈ ಚಟುವಟಿಕೆಯನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.




