ಅಂಗಮಾಲಿಯಲ್ಲಿ ವಾಹನ ಅಪಘಾತ:ನೆಲ್ಲಿಕಟ್ಟೆಯ ಯುವತಿ ಸಾವು: ಸ್ನೇಹಿತನಿಗೆ ಗಾಯ

ಕಾಸರಗೋಡು: ಎರ್ನಾಕುಳಂ  ಸಮೀಪದ ಅಂಗಮಾಲಿಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದು ನೆಲ್ಲಿಕಟ್ಟೆ ನಿವಾಸಿಯಾದ ಯುವತಿ ಸಾವನ್ನಪ್ಪಿದ ಘಟನೆಯಿಂದ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಯಾಗಿದೆ.     ನೆಲ್ಲಿಕಟ್ಟೆ ಬಳಿಯ  ನಿವಾಸಿ ದಿ| ಮುಹಮ್ಮದ್‌ರ ಪುತ್ರಿ ಇಷಾನಾ ಇಸ್ಮತ್ (21) ಸಾವನ್ನಪ್ಪಿದ ಯುವತಿ. ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿ ಯಾದ ಇಷಾನಾ ಇಸ್ಮತ್ ಉತ್ತಮ ಉದ್ಯೋಗ ಅರಸಿ  ಎರ್ನಾಕುಳಂಗೆ ತೆರಳಿದ್ದಳು ಎಂದು ಹೇಳಲಾಗುತ್ತಿದೆ.  ನಿನ್ನೆ ಮುಂಜಾನೆ ಈಕೆ ಸ್ನೇಹಿತನಾದ ಕಾಸರಗೋಡು ನಿವಾಸಿ ಸರ್ಫಾತ್‌ನ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತವುಂಟಾಗಿದೆ.  ಬೈಕ್  ಅಂಗಮಾಲಿಗೆ ಸಮೀಪದ ಅತ್ತಾಣಿ- ಏರ್‌ಪೋರ್ಟ್ ವಿ.ಐ.ಪಿ ತಿರುವು ರಸ್ತೆ ಮೂಲಕ ಹಾದು ಹೋಗುತ್ತಿದ್ದ ವೇಳೆ  ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಇಷಾನಾ ಇಸ್ಮತ್‌ರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ  ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಬೈಕ್ ಚಲಾಯಿಸಿದ ಸರ್ಫಾತ್‌ನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೈಕ್‌ಗೆ ಢಿಕ್ಕಿ ಹೊಡೆದ ಕಾರನ್ನು ಪ್ರಾಯಪೂರ್ತಿಯಾಗದ ಬಾಲಕ ಚಲಾಯಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಇಷಾನಾ ಇಸ್ಮತ್‌ರ ಮೃತದೇ ಹವನ್ನು ಅಂಗಮಾಲಿ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಇಂದು   ಊರಿಗೆ ತರಲಾ ಗುವುದು. ಮೃತರು ತಾಯಿ ನಫೀಸ,   ಸಹೋದರರಾದ ಮುಹಮ್ಮದ್ ಇಜಾಸ್, ಅಬ್ದುಲ್ ಇನಾಸ್, ಅಹಮ್ಮದ್ ಇಮ್ತಿಯಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page