ಕಾಸರಗೋಡು: ಎಡನೀರಿನಿಂದ ಮೈಸೂರಿಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಹಿಂತಿರುಗುತ್ತಿದ್ದ ಮೈಸೂರು ನಿವಾಸಿಯಾಗಿರುವ ಯುವತಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಮೈಸೂರು ಹಣಗೋಡು ಹೋಬಳಿ ಹರಿಣಹಳ್ಳಿ ನಿವಾಸಿ ಹಾಗೂ ಇತ್ತೀಚೆಗಿನಿಂದ ಪಾಡಿ ಗ್ರಾಮದ ಮೇಲಿನ ಎಡನೀರಿನ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದ ದಿ| ಮಂಜುನಾಥ ಎಂಬವರ ಪುತ್ರಿ ನಿರ್ಮಲ (18) ನಾಪತ್ತೆಯಾದ ಯುವತಿ. ಈ ಬಗ್ಗೆ ಆಕೆಯ ಅಜ್ಜ ಶರವಣ ಎಂಬವರು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎಡನೀರಿನಿಂದ ಮೈಸೂರಿಗೆ ಹೋಗಿದ್ದ ನಿರ್ಮಲ ಅಲ್ಲಿಂದ ಮರಳಿ ಬರಲು ಸೆಪ್ಟಂಬರ್ 27ರಂದು ಮಧ್ಯಾಹ್ನ 2.30ಕ್ಕೆ ಬಸ್ಸಿಗೇರಿದ್ದಳೆಂದೂ ಆದರೆ ಆಕೆ ಎಡನೀರಿಗೆ ತಲುಪದೆ ನಾಪತ್ತೆಯಾ ಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.





