ಮುಳ್ಳೇರಿಯ: ಒಂದು ತಿಂಗಳ ಹಿಂದೆ ನಿಧನ ಹೊಂದಿದ ನಿವೃತ್ತ ಮುಖ್ಯೋಪಾಧ್ಯಾಯ, ಕುಂಟಾರು ಹುಣ್ಸೆಡ್ಕ ನಿವಾಸಿ ವೀರೋಜಿ ರಾವ್ರ ಪುತ್ರ ಯಶವಂತ ಕುಮಾರ್ (52) ನಿನ್ನೆ ನಿಧನ ಹೊಂದಿದರು. ಇವರು ರಾಜ್ಯ ಸಾರಿಗೆ ಬಸ್ಗಳಲ್ಲಿ ತಾತ್ಕಾಲಿಕ ಚಾಲಕನಾಗಿದ್ದರು. ಅಲ್ಲದೆ ರಿಕ್ಷಾ ಚಾಲಕನಾಗಿಯೂ ದುಡಿದಿದ್ದರು. ಕೃಷಿಕರಾಗಿದ್ದಾರೆ. ಹೃದಯಾಘಾತ ಮರಣಕ್ಕೆ ಕಾರಣವೆನ್ನ ಲಾಗಿದೆ. ಮೃತರು ತಾಯಿ ಜಯಲಕ್ಷ್ಮಿ, ಪತ್ನಿ ಯಶೋಧ, ಮಕ್ಕಳಾದ ಚೈತನ್ಯ, ಶರಣ್ಯ, ಸಹೋದರರಾದ ಪ್ರವೀಣ್ ಕುಮಾರ್, ಕಿಶೋರ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






