ಮುಳ್ಳೇರಿಯ: ಮುಳಿಯಾರು ಚೂರಿಮೂಲೆಯ ದಿ| ಕೃಷ್ಣ ನಾಯ್ಕ್‌ರ ಪುತ್ರ ಸಿ.ಎಚ್. ರಾಜೇಶ್ವರ (37) ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಮನೆಯೊಳಗೆ ಮೃತದೇಹ ಪತ್ತೆಯಾಗಿದೆ. ಇವರು ಕಲ್ಲುಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಾಯಿ ಪುಷ್ಪ, ಪತ್ನಿ ಸೌಮ್ಯ (ಚಾಪಾಡಿಯಲ್ಲಿ ಅಂಗನವಾಡಿ ಅಧ್ಯಾಪಿಕೆ), ಮಕ್ಕಳಾದ ಗಂಗ, ನಿವೇದ್ಯ, ಸಹೋದರ- ಸಹೋದರಿಯರಾದ ರಘುವರ, ಸುಶೀಲ, ಸವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







