ನಾಲ್ಕು ತಿಂಗಳ ಹಿಂದೆ ತೊಕ್ಕೋಟಿಗೆ ಕೆಲಸಕ್ಕೆಂದು ಹೋದ ಯುವಕ ನಾಪತ್ತೆ: ಮುಂದುವರಿದ ಹುಡುಕಾಟ

ಕುಂಬಳೆ: ಮಂಗಳೂರಿನ ತೊಕ್ಕೋಟಿಗೆ ಕೆಲಸಕ್ಕೆಂದು ತಿಳಿಸಿ ಹೋದ ಯುವಕ ನಾಪತ್ತೆಯಾಗಿ ನಾಲ್ಕು ತಿಂಗಳಾದರೂ ಇನ್ನೂ ಪತ್ತೆಹಚ್ಚಲಾಗಲಿಲ್ಲ. ಎಡನಾಡು ಸಹಕಾರಿ ಬ್ಯಾಂಕ್ ಸಮೀಪದ ಶಾಂತಿ ನಿಲಯ ಕ್ವಾರ್ಟರ್ಸ್‌ನ ಕೆಂಪಯ್ಯ ಎಂಬವರ ಪುತ್ರ ಸಂತೋಷ್ ಎ.ಕೆ. (೩೮) ನಾಪತ್ತೆಯಾಗಿದ್ದು,  ಇವರಿಗಾಗಿ ಈಗಲೂ ಹುಡುಕಾಟ ನಡೆಯುತ್ತಿದೆ.

ಕಳೆದ ಜೂನ್ ೧೩ರಂದು ಬೆಳಿಗ್ಗೆ ೭ ಗಂಟೆಗೆ ತೊಕ್ಕೋಟಿನಲ್ಲಿ ಕೆಲಸಕ್ಕೆಂದು ತಿಳಿಸಿ ಸಂತೋಷ್ ತೆರಳಿದ್ದರು. ಅನಂತರ  ಅವರು ಮರಳಿ ಬಂದಿರಲಿಲ್ಲ. ಅಲ್ಲದೆ  ಅವರ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಹಿನ್ನೆಲೆಯಲ್ಲಿ    ಸಹೋದರಿ ನಂಜಮ್ಮ ಸೆ. ೨೩ರಂದು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ  ನಡೆಸುತ್ತಿದ್ದಾರೆ. ಈಗಾಗಲೇ ವಿವಿಧೆಡೆ ಹುಡುಕಾಟ ನಡೆಸಲಾಗಿದೆಯಾದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದ್ದರಿಂದ   ಸಂತೋಷ್‌ರ ಕುರಿತು ಯಾರಿಗಾ ದರೂ ಮಾಹಿತಿ ಲಭಿಸಿದಲ್ಲಿ ಕುಂಬಳೆ ಪೊಲೀಸ್ ಠಾಣೆಯನ್ನು (ಫೋನ್: 04998-213037) ಸಂಪರ್ಕಿಸ ಬೇಕಾಗಿ ಎಸ್‌ಐ ಎಸ್ ಅನೂಪ್ ತಿಳಿಸಿದ್ದಾರೆ.

RELATED NEWS

You cannot copy contents of this page