ಕಣ್ಣೂರು: ಕಣ್ಣೂರು ತಾವಕ್ಕರ ವಸತಿ ಗೃಹದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಎಂಡಿಎಂಎ ಸಹಿತ ಯುವತಿ-ಯುವಕನನ್ನು ಬಂಧಿಸಿದ್ದಾರೆ. ಕಣ್ಣೂರು ತೈಯ್ಯಿಲ್ ಮರಕ್ಕಾರ್‌ಕಂಡಿ ಚೆರಿಯನಾಡಿ ಹೌಸ್‌ನ ಸಿ.ಎಚ್. ಆರಿಫ್ (41), ಮರಕ್ಕಾರ್‌ಕಂಡಿ ಪಡಿಂಞ್ಞಾರ್ ವೀಟಿಲ್ ಕೆ. ಅಪರ್ಣಾ ಅನೀಶ್ (25) ಎಂಬಿವರನ್ನು ಕಣ್ಣೂರು ಟೌನ್ ಎಸ್‌ಐ ವಿವಿ ದೀಪ್ತಿ ಹಾಗೂ ತಂಡ ಸೆರೆಹಿಡಿದಿದೆ. ತಾವಕ್ಕರ ಸ್ಕೈ ಪ್ಯಾಲೇಸ್ ಹೋಟೆಲ್‌ನ 306ನೇ ನಂಬ್ರ ಕೊಠಡಿಯಲ್ಲಿ ನಿನ್ನೆ ಸಂಜೆ ನಡೆಸಿದ ದಾಳಿಯಲ್ಲಿ ಇವರಿಬ್ಬರನ್ನು ಸೆರೆಹಿಡಿಯಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ಹಾಗೂ ತಂಡ ಲಾಡ್ಜ್‌ಗೆ ತಲುಪಿದೆ. ಪೊಲೀಸರು ತಲುಪುವಾಗ ಕೊಠಡಿ ಯ ಚಿಲಕ ಒಳಗಿನಿಂದ ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ. ಬಾಗಿಲಿಗೆ ಬಡಿದಾಗ ತೆರೆದರೂ ಪೊಲೀಸರನ್ನು ಕಂಡ ಕೂಡಲೇ ಬಾಗಿಲು ಮುಚ್ಚಲು ಯತ್ನಿಸಿದರು. ಆದರೆ ಪೊಲೀಸರು ಬಲಪ್ರಯೋಗಿಸಿ ಬಾಗಿಲನ್ನು ದೂಡಿ ಒಳಗೆ ಪ್ರವೇಶಿಸಿ ಇಬ್ಬರನ್ನು ಕಸ್ಟಡಿಗೆ ತೆಗೆದಿದ್ದಾರೆ. ಬಳಿಕ ನಡೆಸಿದ ತಪಾಸಣೆಯಲ್ಲಿ 2.94 ಗ್ರಾಂ ಗಾಂಜಾ ಹಾಗೂ ಮಾದಕ ಪದಾರ್ಥಗಳನ್ನು ಉಪಯೋಗಿಸಲಿರುವ ಉಪಕ ರಣಗಳನ್ನು ಪತ್ತೆಹಚ್ಚಲಾಗಿದೆ.







