ಕಾಸರಗೋಡು: ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉದಿನೂರು ಮಾಚಿಕ್ಕಾಡ್‌ನ ಅನಾಮಿಕ (19) ನಾಪತ್ತೆಯಾಗಿದ್ದು ಈ ಸಂಬಂಧ ತಾಯಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಅನಾಮಿಕ ನಿನ್ನೆ ಬೆಳಿಗ್ಗೆ ಮನೆಯಿಂದ ತೆರಳಿದ್ದು, ರಾತ್ರಿಯಾ ದರೂ ಮರಳಿ ಬಂದಿಲ್ಲವೆನ್ನಲಾಗಿದೆ. ಇದೇ ವೇಳೆ ಯುವತಿ ಪ್ರಣವ್ ಎಂಬಾತನ ಜೊತೆ ಹೋಗಿರುವುದಾಗಿ ಸಂಶಯಿಸಲಾಗುತ್ತಿದೆಯೆಂದೂ ದೂರಿನಲ್ಲಿ ತಿಳಿಸಲಾಗಿದೆ.






