ಸೀತಾಂಗೋಳಿಯಿಂದ ಯುವತಿ ನಾಪತ್ತೆ

ಸೀತಾಂಗೋಳಿ: ಸೀತಾಂಗೋಳಿ  ಕ್ವಾರ್ಟರ್ಸ್‌ನಿಂದ ಯುವತಿ ಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಇಲ್ಲಿನ ಬಿವರೇಜಸ್ ಮದ್ಯದಂಗಡಿ ಬಳಿಯ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದ ಜುನು ನರ್ಸಾರಿ (23) ಎಂಬಾಕೆ ನಾಪತ್ತೆಯಾಗಿ ದ್ದಾಳೆ. ನಿನ್ನೆ ಬೆಳಿಗ್ಗೆ 10.30ರ ವೇಳೆ ಕ್ವಾರ್ಟರ್ಸ್‌ನಿಂದ ಈಕೆ ತೆರಳಿದ್ದಳು. ಆದರೆ ಮರಳಿ ಬಂದಿಲ್ಲವೆನ್ನಲಾಗಿದೆ. ಇದರಿಂದ ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತಿ ನಿಖಿಲ್ ನರ್ಸಾರಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.  ಇದರಂತೆ ಪೊಲೀಸರು ಕೇಸು ದಾಖಲಿಸಿ ಶೋಧ ಆರಂಭಿಸಿದ್ದಾರೆ. ಇದೇ ವೇಳೆ ಜುನು ಕ್ವಾರ್ಟರ್ಸ್‌ನಿಂದ ಹಣ ಕೊಂಡೊಯ್ದಿರುವುದಾಗಿ ಹೇಳಲಾಗುತ್ತಿದೆ.

You cannot copy contents of this page