ಕ್ಲಿನಿಕ್‌ಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ-ದೂರು

ಕುಂಬಳೆ: ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಇಚ್ಲಂಪಾಡಿ ಕೊಡ್ಯಮ್ಮೆ ಕೋಟೆಕಾರ್‌ನ ವಂದನ (21) ಎಂಬಾಕೆ ನಾಪತ್ತೆಯಾಗಿದ್ದಾ ಳೆನ್ನಲಾಗಿದೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 7.45ರ ವೇಳೆ ಎಂದಿನಂತೆ ಕಾಸರಗೋಡು ಅಣಂಗೂರಿನ ಡೆಂಟಲ್ ಕ್ಲಿನಿಕ್‌ಗೆ ವಂದನ ಕೆಲಸಕ್ಕೆಂದು  ತಿಳಿಸಿ ಹೋಗಿದ್ದು, ಅನಂತರ ಮರಳಿ ಬಂದಿಲ್ಲವೆಂದು ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮರಳಿ ಬರುವಳೆಂದು ಭಾವಿಸಿ ದೂರು ನೀಡಲು ತಡ ಮಾಡಿರುವು ದಾಗಿಯೂ ತಿಳಿಸಲಾಗಿದೆ.

RELATED NEWS

You cannot copy contents of this page