ಅಪಘಾತದಲ್ಲಿ ಸಂಘ ಪರಿವಾರ ಮುಖಂಡ ಧನ್ರಾಜ್ ಪ್ರತಾಪನಗರ ಮೃತ್ಯು: ಸಾವಿರಾರು ಮಂದಿಯಿಂದ ಅಂತಿಮ ನಮನ
ಉಪ್ಪಳ: ಸ್ಕೂಟರ್ಗೆ ಕಾರು ಡಿಕ್ಕಿಹೊಡೆದು ಸಂಘ ಪರಿವಾರದ ಮುಖಂಡ ದಾರುಣವಾಗಿ ಮೃತಪಟ್ಟ ಧನ್ರಾಜ್ ಪ್ರತಾಪನಗರ ಇವರಿಗೆ ಸಾವಿರಾರು ಮಂದಿ ಅಂತಿಮನಮನ ಸಲ್ಲಿಸಿದರು. ಪ್ರತಾಪನಗರ ಬೀಟಿಗದ್ದೆ ನಿವಾಸಿ ದಿ| ಲೋಕಯ್ಯ ಪೂಜಾರಿ ಯವರ ಪುತ್ರ ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಧನ್ರಾಜ್ ಪೂಜಾರಿ [44] ಶನಿವಾರ ಮಧ್ಯಾಹ್ನ ಕುಂಬಳೆಯಿAದ ಸ್ಕೂಟರ್ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಶಿರಿಯ ರಾಷ್ಟಿçÃಯ ಹೆದ್ದಾರಿಯಲ್ಲಿ ಎದುರಿ ನಿಂದ ಬಂದ ಕಾರು ಡಿಕ್ಕಿ ಹೊಡೆ ದಿದ್ದು, ಇದರಿಂದ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಸ್ಥಳೀಯರು ಬಂದ್ಯೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಕೇರಳ ಸಾರಿಗೆ ನಿಗಮದಲ್ಲಿ ಅರೆಕಾಲಿಕ ನಿರ್ವಾಹಕರಾಗಿದ್ದರು. ಬಳಿಕ ಊರಿನಲ್ಲಿ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿ ಸಹಿತ ಸಂಘ ಪರಿವಾರ ಸಂಘಟನೆÀಗÀಳಲ್ಲಿ ಸಕ್ರಿಯರಾಗಿದ್ದರು. ಪ್ರತಾಪನಗರ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ನ ಗೌರವಾಧ್ಯಕ್ಷ, ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರ, ಹಾಗೂ ಊರಿನ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ತಾಯಿ ರೇವತಿ, ಸಹೋ ದರರಾದ ಕಿಶೋರ್, ಜಗದೀಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶನಿವಾರ ರಾತ್ರಿ ಮನೆ ಪರಿಸರದಲ್ಲಿ ಅಂತ್ಯಸAಸ್ಕಾರ ನಡೆಯಿತು. ಅಪಘಾ ತಕ್ಕೆ ಸಂಬAಧಿಸಿ ಕುಂಬಳೆ ಪೊಲೀಸರು ಕಾರನ್ನು ಕಸ್ಟಡಿ ತೆಗೆದು ಕಾರು Zಲಾಯಿಸಿದ ಮಹಿಳೆಯ ವಿರುದ್ದ ಕೇಸು ದಾಖಲಿಸಿದ್ದಾರೆ. ಮೃತರ ಮನೆಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್, ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಶಿವಕೃಷ್ಣ ಭಟ್, ಗೋಪಾಲಕೃಷ್ಣ, ನೇತಾರರಾದ ವಿಜಯ ಕುಮಾರ್ ರೈ, ಪಿ. ರಮೇಶ್, ಸುನಿಲ್ ಅನಂತಪುರ, ಆದರ್ಶ್.ಬಿ.ಎಂ ಮಂಜೇಶ್ವರ, ಅಶ್ವಿನಿ ಎಂ.ಎಲ್, ವಸಂತ ಕುಮಾರ್ ಮಯ್ಯ, ಸುನಿಲ್.ಪಿ.ಆರ್, ಕೆ.ಪಿ ವಲ್ಸರಾಜ್, ಶಾಸಕ ಎ.ಕೆ.ಎಂ ಅಶ್ರ ಫ್ ಹಾಗೂ ಸಂಘ ಪರಿವಾರದ ನೇತಾರರು, ಕಾರ್ಯಕರ್ತರ ಸಹಿತ ಸಾವಿರಾರು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.