ಅಸಂಘಟಿತ ಕಾರ್ಮಿಕರ ಮಕ್ಕಳಿಗಿರುವ ಶಿಕ್ಷಣ ಸೌಲಭ್ಯ ಅರ್ಜಿ ದಿನಾಂಕ ಮುಂದೂಡಿಕೆ

ಕಾಸರಗೋಡು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷಾ ಬೋರ್ಡ್ನಿಂದ ಸದಸ್ಯತ್ವ ಪಡೆದು ಒಂದು ವರ್ಷ ಪೂರ್ತಿಯಾದ ಸದಸ್ಯರ ಮಕ್ಕಳಿಗೆ ಶಿಕ್ಷಣ ಸೌಲಭ್ಯಕ್ಕಿರುವ ಅರ್ಜಿ ನೀಡುವುದಕ್ಕಿರುವ ದಿನಾಂಕವನ್ನು ಈ ತಿಂಗಳ 20ರ ವರೆಗೆ ಮುಂದೂಡಲಾಗಿದೆ. ಅರ್ಜಿಯ ಜೊತೆ ಸದಸ್ಯತ್ವ ಕಾರ್ಡ್ನ ಪ್ರತಿ, ಕ್ಷೇಮನಿಧಿಯಲ್ಲಿ ಮೊತ್ತ ಪಾವತಿಸಿದ ರಶೀದಿಯ ಪ್ರತಿ, ಆಧಾರ್ ಕಾರ್ಡ್ನ ಪ್ರತಿ, ರೇಶನ್ ಕಾರ್ಡ್ನ ಪ್ರತಿ, ವಿದ್ಯಾ ರ್ಥಿಯ ಎಸ್ಎಸ್ಎಲ್ಸಿ ಪುಸ್ತಕದ ಪ್ರತಿ, ಸದಸ್ಯನ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜಯ ಗಳಿಸಿದ ಪರೀಕ್ಷೆಯ ಅಂಕಪಟ್ಟಿಯ ಪ್ರತಿ, ಶಿಕ್ಷಣ ಸಂಸ್ಥೆಯ ಉನ್ನತಾಧಿಕಾರಿ ಗಳ ಸಾಕ್ಷ್ಯಪತ್ರ ಎಂಬಿವುಗಳನ್ನು ಹಾಜರು ಪಡಿಸಬೇಕು. 04972970272ರಿಂದ ಹೆಚ್ಚಿನ ಮಾಹಿತಿ ಲಭಿಸುವುದು.

You cannot copy contents of this page