ಆಲ್‌ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್‌ನ ಜಿಲ್ಲಾ ಸಮ್ಮೇಳನ

ಕುಂಬಳೆ: ಆಲ್ ಕೇರಳ ಫೋ ಟೋಗ್ರಾರ‍್ಸ್ ಅಸೋಸಿಯೇಶನ್‌ನ 40ನೇ ಕಾಸರಗೋಡು ಜಿಲ್ಲಾ ಸಮ್ಮೇಳನ ಕುಂಬಳೆ ಗೋಪಾಲಕೃಷ್ಣ ಸಭಾಭವನದಲ್ಲಿ ಜರಗಿತು. ಎಕೆಪಿಎ ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಧ್ವಜಾರೋಹಣಗೈದರು. ನಂತರ ಎಕೆಪಿಎ ಮಹಿಳಾ ಸದಸೆÀ್ಯಯರಿಂದ ತಿರುವಾದಿರ ಪ್ರದರ್ಶನಗೊಂಡಿತು. ಸಾಹಿತಿ ಅಂಬಿಕಾಸುತನ್ ಮಾಂ ಗಾಡ್ ದೀಪಬೆಳಗಿಸಿ ಉದ್ಘಾಟಿಸಿ ದರು. ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ರಾಜ್ಯ ಅಧ್ಯಕ್ಷ ಎ.ಸಿ. ಜೋನ್ಸನ್ ಫೋಟೋಗ್ರಫಿ ಅವಾರ್ಡ್, ಸಾಧಕರಿಗೆ ಅಭಿನಂದನೆ ನಡೆಸಿದರು. ರಾಜ್ಯ ಕೋಶಾದಿsಕಾರಿ ಉಣ್ಣಿ ಕೂವೋಡ್, ರಾಜ್ಯ ಸಾಂತ್ವನಮ್ ಸಂಚಾಲಕ ಸಜೀಶ್ ಮಣಿ, ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಕೆ.ವಿ., ಜಿಲ್ಲಾ ಉಪಾಧ್ಯಕ್ಷರುಗಳಾದ ಶರೀಫ್, ವೇಣು ವಿವಿ ಕುಂಬಳೆ, ಜಿಲ್ಲಾ ಜೊತೆಕಾರ್ಯದರ್ಶಿ ಪ್ರಜಿತ್ ಎನ್.ಕೆ., ಪಿಆರ್‌ಒ ಅನೂಪ್ ಚಂದೇರ, ಸುದಿsÃರ್ ಕೆ., ರಮ್ಯಾ ರಾಜೀವನ್, ನೇಚರ್ ಕ್ಲಬ್ ಸಂಚಾಲಕ ದಿನೇಶ್, ಇನ್ಶೂರೆನ್ಸ್ ಸಂಚಾಲಕ ಅಶೋಕನ್ ಪೊಯಿನಾಚಿ, ಬ್ಲಡ್ ಡೊನೇಶನ್ ಕ್ಲಬ್ ಸಂಚಾಲಕ ಸನ್ನಿ ಜೇಕಬ್, ಸ್ಪೋಟ್ಸ್ಕ್ಲಬ್ ಸಂಚಾಲಕ ಸುಕು, ಜಿಲ್ಲಾ ಆರ್ಟ್ಸ್ ಕ್ಲಬ್ ಸಂಚಾಲಕ ವಿಜಯನ್ ಉಪ್ಪಳ, ವಿವಿಧ ವಲಯ ಅಧ್ಯಕ್ಷರಾದ ಅಪ್ಪಣ್ಣ ಸೀತಾಂಗೋಳಿ, ವಾಸು ಎ. ಕಾಸರಗೋಡು, ಸಂತೋಷ್, ಅನಿಲ್, ಜನಾರ್ಧನನ್ ಸಿ.ಕೆ. ಉಪಸ್ಥಿತರಿದ್ದರು. ಜಿಲ್ಲಾ ಜೊತೆಕಾರ್ಯದರ್ಶಿ ರಾಜೇಂದ್ರನ್ ವಿ.ಎನ್. ಸ್ವಾಗತಿಸಿ, ಕೋಶಾದಿsಕಾರಿ ಸುನಿಲ್ ಕುಮಾರ್ ಪಿ.ಟಿ.ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಸದಸ್ಯರಿಂದ ಕುಂಬಳೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಛಾಯಾಚಿತ್ರ ಪ್ರದರ್ಶನ, ಟ್ರೇಡ್ ಫೇರ್ ಗಮನಸೆಳೆಯಿತು.

RELATED NEWS

You cannot copy contents of this page