ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿಗೆ ದೌರ್ಜನ್ಯ: ಜಿಮ್ ತರಬೇತುದಾರ ಬಂಧನ
ಕಾಸರಗೋಡು: ಕಾಸರಗೋಡು ನಿವಾಸಿಯಾದ ಯುವತಿಯನ್ನು ಮಂಗಳೂರಿನ ಆಸ್ಪತ್ರೆಯ ಕೊಠಡಿ ಸಹಿತ ವಿವಿಧೆಡೆ ಲೈಂಗಿಕ ದೌರ್ಜ ನ್ಯಗೈಯ್ಯಲಾಯಿತೆಂಬ ದೂರಿನಂತೆ ಕಾಞಂಗಾಡ್ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಞಂಗಾಡ್ ಕೊಡವಲಂ ನಿವಾಸಿ ಕೆ. ಸುಜಿತ್ (29) ಎಂಬಾತನನ್ನು ಮಂಗಳೂರು ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಜಿತ್ ಜಿಮ್ ತರಬೇತುದಾರನಾ ಗಿದ್ದಾನೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಲುಪಿದ ಯುವತಿಗೆ ಸಹಾಯ ಒದಗಿಸಲು ಬಂದಿದ್ದ ಈತ ಮೊದಲು ದೌರ್ಜನ್ಯಗೈದಿದ್ದಾನೆನ್ನ ಲಾಗಿದೆ. ನಂತರ ಯುವತಿಯ ನಗ್ನಚಿತ್ರಗಳನ್ನು ತೆಗೆದು ಕೊಂಡಿದ್ದ ಈತ ಬಳಿಕ ಆ ಫೋಟೋಗಳನ್ನು ತೋರಿಸಿ ಮಂಗಳೂರಿನ ಹೋಟೆಲ್ವೊಂದಕ್ಕೆ ಕರೆಸಿ ಲೈಂಗಿಕ ದೌರ್ಜನ್ಯಗೈದಿರುವು ದಾಗಿ ದೂರಲಾಗಿದೆ. ದೌರ್ಜನ್ಯಕ್ಕೊಳಗಾದ ಯುವತಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುವುದರೊಂದಿಗೆ ದೌರ್ಜನ್ಯ ವಿಷಯ ಬಹಿರಂಗಗೊಂಡಿದೆ. ಬಳಿಕ ಯುವತಿ ಮಂಗಳೂರಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಸುಜಿತ್ನನ್ನು Wಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.