ಉಪಜಿಲ್ಲಾ ಶಾಲಾ ಕಲೋತ್ಸವ: ಪ್ರೌಢಶಾಲಾ ವಿಭಾಗದಲ್ಲಿ ಕೂಡ್ಲು ಶಾಲೆಗೆ ಯಕ್ಷಗಾನದಲ್ಲಿ ಪ್ರಥಮ

ಕಾಸರಗೋಡು: ತೆಕ್ಕಿಲ್ ಪರಂಬ ಶಾಲೆಯಲ್ಲಿ ಜರಗಿದ ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವದ ಪ್ರೌಢಶಾಲಾ ಯಕ್ಷಗಾನ ಸ್ಪರ್ಧೆಯಲ್ಲಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಗೆ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಲಭಿಸಿದೆ. ಇವರು ಪ್ರದರ್ಶಿಸಿದ ‘ಮುರಾಸುರ ವಧೆ’ ಕಥಾಭಾಗದ ಯಕ್ಷಗಾನ ಪ್ರೇಕ್ಷಕರ ಮನಸೂರೆಗೊಂಡಿತು. ರಂಜಿತ್ ಗೋಳಿಯಡ್ಕ ನಿರ್ದೇಶಿಸಿದ್ದು, ವಿದ್ಯಾರ್ಥಿಗಳಾದ ಸಮೀಕ್ಷಾ ಕೆ., ತೃಷಾ, ಧ್ರುವಿತ್, ಪ್ರಣೀತ್ ಕೂಡ್ಲು, ವೈಷ್ಣವಿ ಡಿ., ಶ್ರೀವಿಷ್ಣು ಕೆ.ಎಂ, ಶಿವಾನಿ ಕೂಡ್ಲು ಪಾತ್ರ ನಿರ್ವಹಿಸಿದ್ದರು. ಭಾಗವತರಾಗಿ ತಲ್ಪಣಾಜೆ ವೆಂಕಟ್ರಮಣ ಭಟ್, ಚೆಂಡೆ ಮದ್ದಳೆಯಲ್ಲಿ ಅಡೂರ್ ಹರೀಶ್ ರಾವ್, ಪೃಥ್ವಿ ಸಹಕರಿಸಿದರು.

RELATED NEWS

You cannot copy contents of this page