ಉಪ್ಪಳ ಹೊಳೆಯಲ್ಲಿ ಉಕ್ಕಿ ಹರಿಯುತ್ತಿರುವ ನೀರು: ವಿವಿಧ ಪ್ರದೇಶದ ತೋಟಗಳು ಜಲಾವೃತ

ಉಪ್ಪಳ: ವ್ಯಾಪಕಗೊಂಡ ಮಳೆಯಿಂದಾಗಿ ಜಿಲ್ಲೆಯ ಕೆಲವೆಡೆ ನಾಶ ನಷ್ಟ ಉಂಟಾಗಿದೆ. ಉಪ್ಪಳ ಹೊಳೆಯಲ್ಲಿ ಭಾರೀ ನೀರು ಉಕ್ಕಿ ಹರಿಯುತ್ತಿದ್ದು, ವಿವಿಧ ಪ್ರದೇಶಗಳಲ್ಲಿ ಅಡಿಕೆ ತೋಟಗಳು ಜಲಾವೃತಗೊಂಡು ಕೃಷಿ ನಾಶಗೊಳ್ಳುವ ಭೀತಿ ಕೃಷಿಕರನ್ನು ಕಾಡುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಪ್ಪಳ ಹೊಳೆ ಸಂಪರ್ಕಿಸುವ ಪೈವಳಿಕೆ, ಮೀಜ, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ನೀರು ತುಂಬಿ ಹರಿಯುತ್ತಿರುವುದರಿಂದ ಈ ಪ್ರದೇಶದ ಹಲವಾರು ಅಡಿಕೆ ತೋಟ ಜಲಾವೃತಗೊಂಡಿದೆ. ಪೈವಳಿಕೆ ಪಂಚಾತ್‌ನ ಮುನ್ನಿಪ್ಪಾಡಿಯ ಬಾಲಕೃಷ್ಣ ಕುಲಾಲ್, ಪೂವಪ್ಪ ಕುಲಾಲ್, ಮೀಂಜ ಪಂಚಾಯತ್‌ನ ದರ್ಬೆ ನಿವಾಸಿಗಳಾದ ವಿಠಲ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸುಜಿತ್ ಸಾಮಾನಿ, ವಿಶ್ವನಾಥ ಶೆಟ್ಟಿ, ಮೊಹಮ್ಮದ್, ಕೊಳಚಪ್ಪು ನಿವಾಸಿ ದಿನೇಶ್ ಹಾಗೂ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ದೇಲಂಬಳ, ಮಡಂದೂರು ಸಹಿತ ವಿವಿಧ ಪ್ರದೇಶಗಳಲ್ಲಿ ತೋಟಗಳು ಜಲಾವೃತಗೊಂಡಿದೆ.

You cannot copy contents of this page