ಎಸ್‌ಎಟಿ ಶಾಲೆಯಲ್ಲಿ ಶಾಲಾ ಕಲೋತ್ಸವ

ಮಂಜೇಶ್ವರ: ಶ್ರೀಮತ್ ಅನಂತೇಶ್ವರ ದೇವಳದ ಶಾಲೆಯಲ್ಲಿ ಜರಗುವ ಶಾಲಾ ಕಲೋತ್ಸವವನ್ನು ದೇವಳದ ಆಡಳಿತ ಮಂಡಳಿ ಕೋಶಾಧಿಕಾರಿ ಜಿ. ಪ್ರಶಾಂತ್ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ.ಎ. ಸುನಿಲ್ ಭಟ್, ಮುಖ್ಯೋಪಾಧ್ಯಾ ಯಿನಿ ಸುರೇಖ ಮಲ್ಯ ಎಂ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ  ಅಬ್ದುಲ್ ಬಶೀರ್, ಸದಸ್ಯ ಇಬ್ರಾಹಿಂ, ಎಂಪಿಟಿಎ ಸದಸ್ಯೆ ಸೌಮ್ಯ, ಸ್ಟಾಫ್ ಸೆಕ್ರೆಟರಿ ಕಿರಣ್ ಕುಮಾರ್, ಕಲೋತ್ಸವ ಕನ್ವೀನರ್ ನಾಗೇಶ್ ವಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸುರೇಖ ಮಲ್ಯ ಎಂ ಸ್ವಾಗತಿಸಿದರು. ಗಣೇಶ್ ಪ್ರಸಾದ್ ನಾಯಕ್ ನಿರೂಪಿಸಿದರು. ಕಲೋತ್ಸವವು ಎರಡು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಜರಗಿತು.

RELATED NEWS

You cannot copy contents of this page